emit ಇಮಿಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ emitting, ಭೂತರೂಪ ಮತ್ತು ಭೂತಕೃದಂತ emitted).
  1. ಉತ್ಸರ್ಜಿಸು; (ಪ್ರವಾಹ, ಹೊಗೆ, ವಾಸನೆ, ಬೆಳಕು, ಶಾಖ, ಧ್ವನಿ ಮೊದಲಾದವನ್ನು) ಹೊರಹಾಕು; ಹೊರಡಿಸು; ಹೊರಚಿಮ್ಮು.
  2. (ಪ್ರಾಚೀನ ಪ್ರಯೋಗ) (ಅಭಿಪ್ರಾಯ, ಕಾಗದದ ಹಣ, ಮೊದಲಾದವನ್ನು) ಹೊರಹಾಕು; ಹೊರಬಿಡು; ಹೊರಕಳುಹಿಸು.