emissary ಎಮಿಸರಿ
ನಾಮವಾಚಕ
  1. ಗುಪ್ತದೂತ; ಗುಪ್ತಚಾರ; ಬೇಹುಗಾರ; ಸಾಮಾನ್ಯವಾಗಿ ಯಾವುದೋ ಅನಿಷ್ಟವಾದ ಯಾ ಗುಪ್ತ ಉದ್ದೇಶ ಸಾಧನೆಗಾಗಿ ಕಳುಹಿಸಲಾದ ವ್ಯಕ್ತಿ.
  2. ಪ್ರತಿನಿಧಿ; ಸುದ್ದಿ ಸಂಗ್ರಹ, ಸುದ್ದಿ ತಿಳಿಸುವುದು, ಸಂಧಾನ, ಮೊದಲಾದ ಸಂದರ್ಭಗಳಲ್ಲಿ ಹೆಚ್ಚುಕಡಮೆ ಸ್ವತಂತ್ರವಾಗಿ ವರ್ತಿಸುವ ಅಧಿಕಾರ ಪಡೆದ ಕಾರ್ಯಕರ್ತ: sent a special emissary to discuss peace terms ಶಾಂತಿಯ ಷರತ್ತುಗಳನ್ನು ಚರ್ಚಿಸಲು ಒಬ್ಬ ವಿಶೇಷ ಪ್ರತಿನಿಧಿಯನ್ನು ಕಳುಹಿಸಿದರು.