eminence ಎಮಿನನ್ಸ್‍
ನಾಮವಾಚಕ
  1. ದಿಣ್ಣೆ; ಮೇಡು; ತಿಟ್ಟು; ಪದವು; ಏರು; ಎತ್ತರವಾದ ನೆಲ.
  2. (ಸಮಾಜದಲ್ಲಿ, ಬುದ್ಧಿಶಕ್ತಿ, ಮೊದಲಾದವುಗಳಲ್ಲಿ) ಮೇಲ್ಮೈ; ಹೆಚ್ಚುಗಾರಿಕೆ; ಹಿರಿಮೆ; ಔನ್ನತ್ಯ; ಉನ್ನತಿ; ಉನ್ನತಸ್ಥಾನ; ಉಚ್ಚತೆ; ಉತ್ಕೃಷ್ಟತೆ; ಶ್ರೇಷ್ಠತೆ; ಇತರರನ್ನು ಮೀರಿದ ಹೆಚ್ಚಳ ಯಾ ಹೆಗ್ಗಳಿಕೆ.
  3. (Eminence) (ಕ್ಯಾಥೊಲಿಕರಲ್ಲಿ) ಕಾರ್ಡಿನಲ್‍ ಪದವಿಯ ಬಿರುದು.
  4. ದೊಡ್ಡ ಮನುಷ್ಯ; ಪ್ರಮುಖ ವ್ಯಕ್ತಿ.