emergence ಇಮರ್ಜನ್ಸ್‍
ನಾಮವಾಚಕ
  1. ನಿರ್ಗಮನ; ಹೊರಬರುವಿಕೆ; ಹೊರಹೊಮ್ಮುವಿಕೆ; ಉದಯ; ಗೋಚರವಾಗುವಿಕೆ; ದೃಷ್ಟಿಗೆ ಬೀಳುವುದು: slow emergence from barbarism ಅನಾಗರಿಕತೆಯಿಂದ ನಿಧಾನವಾಗಿ ಹೊರಬರುವಿಕೆ.
  2. ಗಿಡದ ಹೊರಮೈ ಮೇಲಿನ (ಮುಳ್ಳಿನಂಥ) ಬೆಳವಣಿಗೆ.
  3. (ವಿಕಾಸಕ್ರಮದಲ್ಲಿ ಆಗುವಂತೆ) ಆವಿರ್ಭಾವ; ಅನಿರೀಕ್ಷಿತ ಬೆಳವಣಿಗೆ; ಆಕಸ್ಮಿಕ ಬೆಳವಣಿಗೆ.