emerge ಇಮರ್ಜ್‍
ಅಕರ್ಮಕ ಕ್ರಿಯಾಪದ
  1. ನಿರ್ಗಮಿಸು; ದ್ರವದಿಂದ ಮೇಲಕ್ಕೆ ಬರು, ಹೊರಬರು.
  2. (ಸುತ್ತುಗಟ್ಟಿದ ಆವರಣ ಮೊದಲಾದವುಗಳಿಂದ) ಕಣ್ಣಿಗೆ ಬೀಳು; ಕಾಣಬರು; ಕಾಣಿಸು; ಗೋಚರಿಸು; ಎದ್ದುಬರು; ದೃಷ್ಟಿಗೆ ಬೀಳು: the moon emerged from behind the clouds ಮೋಡಗಳ ಹಿಂದಿನಿಂದ ಚಂದ್ರ ಎದ್ದು ಬಂದ.
  3. (ಕಷ್ಟ, ಸಂಕಟ ಸ್ಥಿತಿ, ಮೊದಲಾದವುಗಳಿಂದ) ಪಾರಾಗು; ಬಿಡುಗಡೆ ಹೊಂದು; ಹೊರಬರು: the common people emerged from illiteracy ಸಾಮಾನ್ಯ ಜನ ಅನಕ್ಷರತೆಯಿಂದ ಪಾರಾದರು.
  4. (ಸಂಗತಿ ಮೊದಲಾದವುಗಳ ವಿಷಯದಲ್ಲಿ) ಹೊರಪಡು; ಬಯಲಾಗು; ತಿಳಿದುಬರು; ವ್ಯಕ್ತವಾಗು; ಬೆಳಕಿಗೆ ಬರು; ಸ್ಪಷ್ಟವಾಗು; ತನಿಖೆ ಯಾ ವಿಚಾರದ ಪರಿಣಾಮವಾಗಿ ಬಯಲಿಗೆ ಬರು: no new ideas emerged during the talks ಯಾವ ಹೊಸ ಅಭಿಪ್ರಾಯಗಳೂ ಮಾತುಕತೆಗಳಲ್ಲಿ ಹೊರಪಡಲಿಲ್ಲ.
  5. (ಪ್ರಶ್ನೆ, ಕಷ್ಟ, ಮೊದಲಾದವು) ಹುಟ್ಟು; ಜನಿಸು; ಉಂಟಾಗು; ತಲೆದೋರು; ತಲೆಯೆತ್ತು; ಉದಿಸು; ಏಳು; ಉದ್ಭವಿಸು; ಮೂಡು: a new problem then emerged ಒಂದು ಹೊಸ ಸಮಸ್ಯೆ ಆಗ ತಲೆದೋರಿತು.
  6. (ವಿಕಸನದ ಮೂಲಕ) ಆವಿರ್ಭವಿಸು; ಹುಟ್ಟು; ಅಸ್ತಿತ್ವಕ್ಕೆ ಬರು: certain new viruses appear to have emerged in recent years ಈಚಿನ ವರ್ಷಗಳಲ್ಲಿ ಕೆಲವು ಹೊಸ ವೈರಸ್ಸುಗಳು ಅಸ್ತಿತ್ವಕ್ಕೆ ಬಂದಿರುವಂತೆ ಕಾಣುತ್ತದೆ.