emend ಇ(ಈ)ಮೆಂಡ್‍
ಸಕರ್ಮಕ ಕ್ರಿಯಾಪದ
  1. (ಗ್ರಂಥಪಾಠ ಮೊದಲಾದವನ್ನು) ತಪ್ಪುತಿದ್ದು; ಪರಿಷ್ಕರಿಸು; ಸರಿಪಡಿಸು.
  2. (ಗ್ರಂಥಪಾಠ ಮೊದಲಾದವುಗಳ) ತಪ್ಪುತಿದ್ದಲು ಪ್ರಯತ್ನಿಸು; ಪರಿಷ್ಕರಿಸಲು ಉದ್ದೇಶಿಸು: will emend a chapter here or a verse there ಇಲ್ಲೊಂದು ಅಧ್ಯಾಯವನ್ನೋ ಅಲ್ಲೊಂದು ಪದ್ಯವನ್ನೋ ತಿದ್ದುವೆ.
  3. ಬದಲಾಯಿಸು; ಪರಿವರ್ತಿಸು; ಮೂಲ ಉದ್ದೇಶಕ್ಕಿಂತ ಬೇರೆಯಾದ ಉದ್ದೇಶಕ್ಕಾಗಿ ಬದಲಾಯಿಸು: the Roman Paul borrowed Plato’s image and emended it to suit his needs ರೋಮನ್‍ ಪಾಲನು ಪ್ಲೇಟೊ ಬಳಸಿದ ಪ್ರತಿಮೆ ತೆಗೆದುಕೊಂಡು ತನ್ನ ಉದ್ದೇಶಕ್ಕೆ ತಕ್ಕಂತೆ ಬದಲಾಯಿಸಿದ.