embroil ಇಂ(ಎಂ)ಬ್ರಾಇಲ್‍
ಸಕರ್ಮಕ ಕ್ರಿಯಾಪದ
  1. (ಸಂಗತಿಗಳು, ಕಥನ, ಮೊದಲಾದವನ್ನು) ತೊಡಕುಮಾಡು; ಸಿಕ್ಕುಮಾಡು; ಜಟಿಲಗೊಳಿಸು; ಗೋಜಿಸು; ಗೊಂದಲಕ್ಕೆ ಸಿಕ್ಕಿಸು; ಗೊಂದಲಮಾಡು: political complications which embroiled the whole policy ಇಡೀ ನೀತಿಯನ್ನೇ ಗೊಂದಲಕ್ಕೆ ಸಿಕ್ಕಿಸಿದ ರಾಜಕೀಯ ತೊಡಕುಗಳು.
  2. (ವ್ಯಕ್ತಿಯನ್ನು ಪರಸ್ಪರ) ದ್ವೇಷಕ್ಕೆ ಸಿಕ್ಕಿಸು; ವೈಷಮ್ಯಕ್ಕೆ ಗುರಿಮಾಡು; ವೈಮನಸ್ಯಕ್ಕೆ ಈಡುಮಾಡು: found himself embroiled with the group investigating the union’s finances ಸಂಘದ ಹಣಕಾಸಿನ ಸ್ಥಿತಿಯನ್ನು ತನಿಖೆಮಾಡುವ ತಂಡದೊಂದಿಗೆ ಅವನು ದ್ವೇಷ ಕಟ್ಟಿಕೊಳ್ಳುವ ಸ್ಥಿತಿಗೆ ಬಂದ.