See also 2embrace
1embrace ಇಂ(ಎಂ)ಬ್ರೇಸ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ, ತೋಳಿನಿಂದ) ತಬ್ಬಿಕೊ; ಅಪ್ಪಿಕೊ; ತಕ್ಕೈಸು; ಆಲಿಂಗಿಸು; ಅಪ್ಪಿಹಿಡಿದುಕೊ; ತೆಕ್ಕೆಯಲ್ಲಿ ಸಿಕ್ಕಿಸಿಕೊ.
  2. ಸುತ್ತುಗಟ್ಟು; ಒಳಕೊಳ್ಳು; ಆವರಿಸು: the strong walls that embrace the city ನಗರವನ್ನು ಸುತ್ತುಗಟ್ಟಿರುವ ಬಲವಾದ ಗೋಡೆಗಳು.
  3. (ನೀಡಿಕೆ, ಅವಕಾಶ, ಸಂದರ್ಭ, ಮೊದಲಾದವನ್ನು) ಆಸಕ್ತಿಯಿಂದ ಒಪ್ಪಿಕೊ; ಅದರದಿಂದ ಸ್ವೀಕರಿಸು, ಉಪಯೋಗಿಸಿಕೊ, ಬಳಸಿಕೊ: an instructor should embrace every opportunity to prepare himself ಬೋಧಕನು ತನ್ನ ಸಿದ್ಧತೆಗಾಗಿ ಪ್ರತಿಯೊಂದು ಅವಕಾಶವನ್ನೂ ಆಸಕ್ತಿಯಿಂದ ಉಪಯೋಗಿಸಿಕೊಳ್ಳಬೇಕು.
  4. (ಕಾರ್ಯಮಾರ್ಗ, ತತ್ತ್ವ, ಪಕ್ಷ, ಧ್ಯೇಯ ಇವನ್ನು) ಹಿಡಿ; ತೆಗೆದುಕೊ; ಕೈಕೊಳ್ಳು; ಅಂಗೀಕರಿಸು; ಅವಲಂಬಿಸು; ಸ್ವೀಕರಿಸು: to embrace Buddhism ಬೌದ್ಧ ಧರ್ಮವನ್ನು ಅವಲಂಬಿಸಲು.
  5. (ವಸ್ತುಗಳ ವಿಷಯದಲ್ಲಿ) ಸೇರಿಸಿಕೊ; ಒಳಗೊಳ್ಳು; ಒಳಗೊಂಡಿರು; ಉಳ್ಳದ್ದಾಗಿರು; ಅಡಕಮಾಡಿಕೊ: an encyclopaedia embraces a great number of subjects ವಿಶ್ವಕೋಶ ಅನೇಕ ವಿಷಯಗಳನ್ನು ಒಳಗೊಳ್ಳುತ್ತದೆ.
  6. (ಕಣ್ಣಿನಿಂದ, ಮನಸ್ಸಿನಿಂದ) ಗ್ರಹಿಸು; ಅರಿ; ತಿಳಿ.
See also 1embrace
2embrace ಇಂ(ಎಂ)ಬ್ರೇಸ್‍
ನಾಮವಾಚಕ
  1. ತೆಕ್ಕೆ; ಅಪ್ಪುಗೆ; ತಬ್ಬು; ಅಲಿಂಗನ.
  2. (ಸೌಮ್ಯೋಕ್ತಿ) ಸಂಭೋಗ; ಮೈಥುನ.