embody ಇಂ(ಎಂ)ಬಾಡಿ
ಸಕರ್ಮಕ ಕ್ರಿಯಾಪದ
  1. (ಆತ್ಮಕ್ಕೆ) ದೇಹ ತೊಡಿಸು; ದೇಹಕೊಡು; ಶರೀರ ಕೊಡು; ರೂಪ, ಆಕಾರ ಒದಗಿಸು; ಮೈದಾಳಿಸು; ಸಶರೀರವಾಗಿಸು.
  2. (ಭಾವನೆಗಳು ಮೊದಲಾದವನ್ನು) ಮೂರ್ತೀಕರಿಸು; ಮೂರ್ತರೂಪವಾಗಿಸು; ಸಾಕಾರಗೊಳಿಸು: he attempted to embody basic democratic principles in the treaty ಒಪ್ಪಂದದಲ್ಲಿ ಪ್ರಜಾಪ್ರಭುತ್ವದ ತತ್ತ್ವಗಳಿಗೆ ಮೂರ್ತ ರೂಪ ಕೊಡಲು ಪ್ರಯತ್ನಿಸಿದನು.
  3. (ತತ್ತ್ವಗಳನ್ನು ಕಾರ್ಯ ಮೊದಲಾದವುಗಳಲ್ಲಿ) ಸ್ಪಷ್ಟವಾಗಿ ವ್ಯಕ್ತಪಡಿಸು; ಪ್ರಕಟಿಸು; ಪ್ರದರ್ಶಿಸು; ತೋರಿಸು.
  4. (ವ್ಯಕ್ತಿ ಯಾ ವಸ್ತುಗಳ ವಿಷಯದಲ್ಲಿ ಭಾವ ಮೊದಲಾದವುಗಳ) ಸಾಕಾರವಾಗಿರು; ಮೂರ್ತರೂಪವಾಗಿರು; ಅಭಿವ್ಯಕ್ತಿಯಾಗಿರು; ಸ್ವರೂಪವಾಗಿರು.
  5. ಏಕೀಕರಿಸು; ಸಂಸ್ಥೆಯಾಗಿ ಒಂದುಗೂಡಿಸು, ಒಟ್ಟುಗೂಡಿಸು; ಒಂದಾಗಿ ಸೇರಿಸು.
  6. ಒಳಕೊಳ್ಳು; ಸೇರಿಸಿಕೊ; ಮೈಗೂಡಿಸಿಕೊ; ಅಡಕಮಾಡಿಕೊ; ಗರ್ಭೀಕರಿಸು: the latest locomotives embody many new features ಈಗತಾನೆ ಬಂದಿರುವ ಲೋಕೊಮೋಟಿವ್‍ಗಳು ಅನೇಕ ಹೊಸ ವೈಶಿಷ್ಟ್ಯಗಳನ್ನೊಳಗೊಂಡಿವೆ.