embodiment ಇಂ(ಎಂ)ಬಾಡಿಮಂಟ್‍
ನಾಮವಾಚಕ
  1. ಮೂರ್ತೀಕರಣ; ಮೈದಾಳಿಸುವಿಕೆ; ಸಶರೀರಗೊಳಿಸುವಿಕೆ.
  2. ಸಾಕಾರತೆ; ಮೂರ್ತತೆ; ಮೂರ್ತಗೊಂಡ, ಮೈದಾಳಿದ, ಸಶರೀರಗೊಂಡ ಸ್ಥಿತಿ.
  3. ಮೂರ್ತರೂಪ; ಸಾಕಾರ ರೂಪ; ಮೂರ್ತ ಸ್ವರೂಪ; (ಆತ್ಮ, ಭಾವನೆ, ತತ್ತ್ವ, ಮಾದರಿ, ಮೊದಲಾದವುಗಳು) ಮೈದಾಳಿದ ವಸ್ತು; ಸಶರೀರಗೊಂಡ ವಸ್ತು: the embodiment of courage ಧೈರ್ಯದ ಮೂರ್ತರೂಪ.
  4. ಏಕೀತವಾಗಿರುವಿಕೆ; ಒಂದಾಗಿರುವಿಕೆ; ಒಟ್ಟುಗೂಡಿರುವಿಕೆ; ಒಂದಾಗಿ ಸೇರಿಕೊಂಡಿರುವಿಕೆ.
  5. ಒಳಗೊಂಡಿರುವಿಕೆ; ಗರ್ಭೀಕರಿಸಿರುವಿಕೆ.