emblazonment ಇಂ(ಎಂ)ಬ್ಲೇಸ್‍ನ್‍ಮಂಟ್‍
ನಾಮವಾಚಕ
  1. (ವಂಶಲಾಂಛನದ ಗುರಾಣಿಯ ಮೇಲಿನಂತೆ) ಎದ್ದು ಕಾಣುವ ಚಿತ್ರೀಕರಣ.
  2. (ಗುರಾಣಿಯ ಮೇಲೆ) ವಂಶಲಾಂಛನ ಚಿಹ್ನೆಗಳಿಂದ ಅಲಂಕರಣ, ಕೆತ್ತನೆ.
  3. ಕೊಂಡಾಟ; ಹೊಗಳಿಕೆ; ಶ್ಲಾಘನೆ; ಪ್ರಸಿದ್ಧಿಗೊಳಿಸಿಕೆ; ಸ್ತುತಿಸುವುದು; ಉಗ್ಗಡಿಸಿಕೆ; ಉಗ್ಗಡಣೆ.
  4. (ವಂಶಲಾಂಛನ ಚಿಹ್ನೆ, ಬಣ್ಣ, ಪದ, ಮೊದಲಾದವುಗಳಿಂದ) ಅಲಂಕರಿಸಿದ್ದು; ಚಿತ್ರಿಸಿದ್ದು; ಕೆತ್ತಿದ್ದು.
  5. ಕೊಂಡಾಡಲ್ಪಟ್ಟ ವಿಷಯ; ಪ್ರಸಿದ್ಧಿಗೊಳಿಸಲ್ಪಟ್ಟ ವಸ್ತು.