emblazon ಇಂ(ಎಂ)ಬ್ಲೇಸ್‍ನ್‍
ಸಕರ್ಮಕ ಕ್ರಿಯಾಪದ
  1. (ವಂಶಲಾಂಛನದ ಗುರಾಣಿಯ ಮೇಲಿನಂತೆ) ಎದ್ದು ಕಾಣುವಂತೆ ಚಿತ್ರಿಸು.
  2. (ಗುರಾಣಿಯ ಮೇಲೆ) ವಂಶಲಾಂಛನ ಚಿಹ್ನೆಗಳಿಂದ — ಅಂಕಾರ ಮಾಡು, ಅಂಕರಿಸು, ಕೆತ್ತು.
  3. ಕೊಂಡಾಡು; ಹೊಗಳು; ಶ್ಲಾಘಿಸು ; ಸ್ತುತಿಸು; ಉಗ್ಗಡಿಸು: subjects emblazoned the king’s fame ಪ್ರಜೆಗಳು ದೊರೆಯ ಕೀರ್ತಿಯನ್ನು ಕೊಂಡಾಡಿದರು.
  4. (ಹೊಳೆಯುವ ಬಣ್ಣ, ಚಿತ್ತಾರ, ಪದ, ಮೊದಲಾದವುಗಳಿಂದ) ಅಲಂಕರಿಸು; ಶೃಂಗಾರಮಾಡು; ಸಿಂಗರಿಸು: banners emblazoned with the emblem of the cross ಶಿಲುಬೆಯ ಲಾಂಛನಗಳಿಂದ ಅಲಂಕರಿಸಿದ ಧ್ವಜಗಳು.