embellish ಇಂಬೆಲಿಷ್‍
ಸಕರ್ಮಕ ಕ್ರಿಯಾಪದ
  1. ಅಂದಗೊಳಿಸು; ಚಂದಮಾಡು; ಸುಂದರಗೊಳಿಸು; ಅಲಂಕರಿಸು; ಸಿಂಗರಿಸು; ಸೊಗಸುಮಾಡು: embellished a book with pictures ಅವನು ಪುಸ್ತಕವನ್ನು ಚಿತ್ರಗಳಿಂದ ಅಂದಗೊಳಿಸಿದನು.
  2. (ಕಥೆ, ಹೇಳಿಕೆಗಳಿಗೆ ಕಲ್ಪಿತ ಅಂಶಗಳನ್ನು ಸೇರಿಸಿ) ಬಣ್ಣಕಟ್ಟು; ರಂಗೇರಿಸು; ಉಪ್ಪುಕಾರ ಹಾಕು; ಒಗ್ಗರಣೆ ಹಾಕು; ಸ್ವಾರಸ್ಯ ಹೆಚ್ಚಿಸು: embellished his story, to suit himself ತನಗೆ ಅನುಕೂಲವಾಗುವಂತೆ ಅವನು ತನ್ನ ಕಥೆಗೆ ಬಣ್ಣಕಟ್ಟಿದ.