See also 2embargo
1embargo ಎಂ(ಇಂ)ಬಾರ್ಗೋ
ನಾಮವಾಚಕ
(ಬಹುವಚನ embargoes).
  1. ಬಂದರು ನಿರ್ಬಂಧ; ರೇವು ಪ್ರತಿಬಂಧಕಾಜ್ಞೆ; ಒಂದು ದೇಶದಲ್ಲಿಯ ಬಂದರಿನಲ್ಲಿರುವ ಹಡಗುಗಳು ಹೊರಹೋಗಕೂಡದೆಂದೂ, ಹೊರದೇಶದ ಹಡಗುಗಳು ಬಂದರಿನೊಳಕ್ಕೆ ಬರಕೂಡದೆಂದೂ ಮಾಡಿದ (ಸರ್ಕಾರದ) ಆಜ್ಞೆ, ಪ್ರತಿಬಂಧಕಾಜ್ಞೆ.
  2. ವಾಣಿಜ್ಯ ಪ್ರತಿಬಂಧಕಾಜ್ಞೆ; ವ್ಯಾಪಾರ ತಡೆಯಾಜ್ಞೆ; ವಾಣಿಜ್ಯ ನಿರ್ಬಂಧ; ವ್ಯಾಪಾರ ನಿಷೇಧ; ವಾಣಿಜ್ಯದ, ವ್ಯಾಪಾರದ ಒಂದು ವಿಭಾಗವನ್ನು ತಡೆಮಾಡುವುದು, ನಡೆಯದಂತೆ ನಿರ್ಬಂಧಿಸುವುದು.
  3. ಅಡ್ಡಿ; ತಡೆ; ನಿರ್ಬಂಧ; ಅಡಚಣೆ; ಪ್ರತಿಬಂಧ.
ಪದಗುಚ್ಛ
  1. be under an embargo ವಾಣಿಜ್ಯನಿಷೇಧಕ್ಕೊಳಪಟ್ಟಿರು.
  2. lay on an embargo ವಾಣಿಜ್ಯನಿರ್ಬಂಧ ಹಾಕು.
See also 1embargo
2embargo ಎಂ(ಇಂ)ಬಾರ್ಗೋ
ಸಕರ್ಮಕ ಕ್ರಿಯಾಪದ
  1. (ಹಡಗುಗಳನ್ನು) ರೇವುನಿರ್ಬಂಧದಲ್ಲಿಡು; ಬಂದರು ಬಂದುಮಾಡು.
  2. (ವ್ಯಾಪಾರ ಮೊದಲಾದವನ್ನು) ತಡೆಮಾಡು; ತಡೆಗಟ್ಟು; ನಿರ್ಬಂಧಿಸು.
  3. (ಹಡಗನ್ನು, ಸರಕನ್ನು ಸರಕಾರದ ಕೆಲಸಕ್ಕಾಗಿ) ಮುಟ್ಟುಗೋಲು ಹಾಕಿಕೊ; ಹಿಡಿದುಕೊ; ವಶಪಡಿಸಿಕೊ; ಸ್ವಾಧಿನಪಡಿಸಿಕೊ.