embalm ಇಂಬಾಮ್‍
ಸಕರ್ಮಕ ಕ್ರಿಯಾಪದ
  1. (ಹಿಂದೆ ಸುಗಂಧ ದ್ರವ್ಯಗಳನ್ನು ಹಾಕಿ, ಈಗ ರಕ್ತನಾಳಗಲ್ಲಿ ಮದ್ದುಚುಚ್ಚಿ) (ಹೆಣವನ್ನು) ಕೆಡದಂತಿಡು; ಕೆಡದಂತೆ ಕಾಪಾಡು; ಸಂರಕ್ಷಿಸು.
  2. ಮರೆಯದ ಹಾಗೆ ಉಳಿಸು; ಸ್ಮೃತಿಯಲ್ಲಿಳಿಸು; ಸ್ಮರಣೆ ಉಳಿಸು.
  3. ಸುವಾಸನೆ ಕಟ್ಟು; ಪರಿಮಳ ಕಟ್ಟು; ಸುಗಂಧವುಳ್ಳದ್ದನ್ನಾಗಿ ಮಾಡು; ಸುವಾಸಿತವಾಗಿ ಮಾಡು.
  4. ಇದ್ದಂತೆಯೇ ಉಳಿಸು, ಉಳಿಸಿಕೊಂಡು ಬರು; ಬದಲಾಯಿಸುವಂತೆ ಮಾಡು; ಬೆಳವಣಿಗೆ ತಪ್ಪಿಸು: great ideas embalmed forever in musty libraries ಪುರಾತನ ವಾಚನಾಲಯಗಳಲ್ಲಿ ಎಂದೆಂದಿಗೂ ಬದಲಾಯಿಸದಂತಿಟ್ಟ ಮಹಾಕಲ್ಪನೆಗಳು.