emanation ಎಮನೇಷನ್‍
ನಾಮವಾಚಕ
  1. ಹೊರಡುವಿಕೆ; ಹೊಮ್ಮುವಿಕೆ; ಹುಟ್ಟುವುದು; ಉದ್ಗಮ.
  2. (ಮುಖ್ಯವಾಗಿ ಸದ್ಗುಣಗಳು, ಲಕ್ಷಣಗಳು, ನೈತಿಕ ಶಕ್ತಿಗಳು, ಮೊದಲಾದವುಗಳ ವಿಷಯದಲ್ಲಿರೂಪಕವಾಗಿ) ಉದ್ಭವ; ಒಂದು ಮೂಲದಿಂದ ಹೊರಡುವ ವಸ್ತು.
  3. ದೈವಸತ್ತ್ವದಿಂದ ಉದ್ಭವಿಸಿದ ವ್ಯಕ್ತಿ, ವಸ್ತು.
  4. (ಮುಖ್ಯವಾಗಿ ನಿರ್ದಿಷ್ಟ ಸಾಮಾಜಿಕ ಪರಿಸರದ ಯಾ ಸಾಂಸ್ಕೃತಿಕ ಮಟ್ಟದ) ಫಲಿತಾಂಶ; ಪರಿಣಾಮ.
  5. (ರಸಾಯನವಿಜ್ಞಾನ) ನಿಸ್ಸರಣ; ವಿಕಿರಣಪಟು ಘನಪದಾರ್ಥದಿಂದ ಹೊರಬರುವ ವಿಕಿರಣಪಟು ಅನಿಲ.