emanate ಎಮನೇಟ್‍
ಸಕರ್ಮಕ ಕ್ರಿಯಾಪದ

ಕೊಡು; ಹೊರಚೆಲ್ಲು; ಹೊರಡಿಸು; ಹೊರಸೂಸು; ಹೊಮ್ಮಿಸು: some radioactive substances can emanate dangerous radiations for many years ಕೆಲವು ವಿಕಿರಣಶೀಲ ಪದಾರ್ಥಗಳು ಅನೇಕ ವರ್ಷಗಳ ಕಾಲ ಅಪಾಯಕರ ವಿಕಿರಣಗಳನ್ನು ಹೊರಸೂಸಬಲ್ಲವು.

ಅಕರ್ಮಕ ಕ್ರಿಯಾಪದ
  1. (ಮೂಲ, ವ್ಯಕ್ತಿ, ಮೊದಲಾದವುಗಳಿಂದ) ಹೊರಬೀಳು; ಹೊರಡು; ಹರಿ; ಹೊಮ್ಮು; ಹುಟ್ಟು; ಉತ್ಪನ್ನವಾಗು; ಉದ್ಭವಿಸು: fragrance emanates from flowers ಹೂಗಳಿಂದ ಕಂಪು ಹೊಮ್ಮುತ್ತದೆ.
  2. (ಅನಿಲ, ಬೆಳಕು, ಇತ್ಯಾದಿಗಳ ವಿಷಯದಲ್ಲಿ) ಹೊರಸೂಸು; ಹೊರಬೀಳು; ಹೊಮ್ಮು.