elude ಇಲ್ಯೂ(ಲೂ)ಡ್‍
ಸಕರ್ಮಕ ಕ್ರಿಯಾಪದ
  1. (ಹೊಡೆತ, ಅಪಾಯ, ಕಷ್ಟ, ಹಿಡಿತ, ಮನುಷ್ಯ, ವಿಚಾರಣೆ, ಅವಲೋಕನೆ ಇವುಗಳಿಂದ) ಉಪಾಯವಾಗಿ ತಪ್ಪಿಸಿಕೊ, ಜಾರಿಕೊ, ನುಸುಳಿಕೊ, ನುಣುಚಿಕೊ.
  2. (ಕಾನೂನುಪಾಲನೆ, ಕೋರಿಕೆಯನ್ನು ಸಲ್ಲಿಸುವುದು, ಒಪ್ಪಂದ ಯಾ ಹೊಣೆಗಾರಿಕೆ ಇವುಗಳಿಂದ) ತಪ್ಪಿಸಿಕೊ; ಜಾರಿಕೊ: elude a treaty ಒಪ್ಪಂದದಿಂದ ತಪ್ಪಿಸಿಕೊ. he eludes law by piteous looks ದೈನ್ಯಷ್ಟಿ ಹರಿಸುತ್ತಾ ಅವನು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾನೆ, ಕಾನೂನುಪಾಲಕರ ಕಣ್ಣಿಗೆ ಮಣ್ಣೆರಚುತ್ತಾನೆ.
  3. (ಅರಿವಿಗೆ, ಬುದ್ಧಿಗೆ) ಎಟುಕದಿರು; ಮೀರಿರು; ಒಳಪಡದಿರು; ಒಳಗಾಗದಿರು; ಹಿಡಿತಕ್ಕೆ ಸಿಕ್ಕದಿರು; ಗ್ರಹಿಕೆಗೆ ಸಿಕ್ಕದಿರು: your meaning eludes me ನಿನ್ನ ಮಾತಿನ ಅರ್ಥ ನನ್ನ ಗ್ರಹಿಕೆಗೆ ಸಿಕ್ಕದು.