else ಎಲ್ಸ್‍
ಕ್ರಿಯಾವಿಶೇಷಣ

(ಅನಿರ್ದಿಷ್ಟ ಸರ್ವನಾಮ ಮತ್ತು ಪ್ರಶ್ನಾರ್ಥಕ ಸರ್ವನಾಮಗಳ ಮುಂದೆ).

  1. ಮತ್ತೆ; ಮತ್ತು; ಜೊತೆಗೆ; ಅಲ್ಲದೆ; ಇನ್ನೂ: anything, anybody, anyone, else? ಮತ್ತೆ (ಏನಾದರೂ) ಯಾರಾದರೂ (ಉಂಟೇ?) who else? who else’s? whose else? ಮತ್ತೆ ಯಾರು? ಯಾರದು? ಯಾರ?
  2. ಬದಲು ಬೇರೆ; ಪ್ರತಿ; ಭಿನ್ನ; ಬಿಟ್ಟು: what else could I say? ನಾನು (ಅದರ ಬದಲು) ಏನು ತಾನೇ ಹೇಳಬಹುದಾಗಿತ್ತು?
  3. ಇಲ್ಲವಾದರೆ; ಅಲ್ಲದಿದ್ದರೆ; ಇಲ್ಲದಿದ್ದರೆ; ತಪ್ಪಿದರೆ: run, (or) else you will be late ಓಡು, ಇಲ್ಲದಿದ್ದರೆ ತಡವಾಗುತ್ತದೆ.
ಪದಗುಚ್ಛ

or else (ಆಡುಮಾತು) (ಎಚ್ಚರಿಕೆ ಕೊಡಲು ಯಾ ಹೆದರಿಸಲು ಬಳಸುವ) ಇಲ್ಲದಿದ್ದರೆ (ನೋಡಿಕೊ): hand over the money or else ಹಣ ಕೊಡು, ಇಲ್ಲದಿದ್ದರೆ (ನೋಡಿಕೊ).