elope ಇಲೋಪ್‍
ಅಕರ್ಮಕ ಕ್ರಿಯಾಪದ
  1. (ಹೆಂಗಸಿನ ವಿಷಯದಲ್ಲಿ, ಗಂಡನನ್ನು, ಮನೆಯನ್ನು ಬಿಟ್ಟು) ಇನ್ನೊಬ್ಬನ ಜೊತೆ ಓಡಿಹೋಗು; ಇನ್ನೊಬ್ಬನನ್ನು ಕಟ್ಟಿಕೊಂಡು ಹೋಗು; ಪ್ರೇಮಿಯೊಂದಿಗೆ ಓಡಿಹೋಗು.
  2. ನಾಪತ್ತೆಯಾಗು; ತಲೆತಪ್ಪಿಸಿಕೊಂಡು ಹೋಗು; ಹೇಳದೆ ಕೇಳದೆ ಓಡಿಹೋಗು; ಕದ್ದೋಡು; ಪರಾರಿಯಾಗು; ಪಲಾಯನಮಾಡು: he eloped from his creditors ಅವನು ಸಾಲಗಾರರಿಂದ ತಲೆಮರೆಸಿಕೊಂಡು ಓಡಿಹೋದ.
  3. (ಹುಡುಗ ಹುಡುಗಿಯರ ವಿಷಯದಲ್ಲಿ, ಸಾಮಾನ್ಯವಾಗಿ ತಂದೆ ತಾಯಿಯರ ಸಮ್ಮತಿಯಿಲ್ಲದೆ) ಮದುವೆಯಾಗಲು ಓಡಿಹೋಗು; ವಿವಾಹವಾಗಲು ಕದ್ದೋಡು.