elixir ಇ(ಎ)ಲಿಕ್ಸರ್‍
ನಾಮವಾಚಕ
  1. ಸ್ಪರ್ಶಮಣಿ; ಸ್ಪರ್ಶವೇದಿ; ಕೀಳುಲೋಹಗಳನ್ನು ಚಿನ್ನವಾಗಿ ಮಾರ್ಪಡಿಸುವುದೆಂದು ರಸವಾದಿಗಳು ನಂಬಿದ್ದ ಪದಾರ್ಥ.
  2. ಸಿದ್ಧರಸ; ಅತ; ಆಯುಸ್ಸನ್ನು ಅಪರಿಮಿತವಾಗಿ ಹೆಚ್ಚಿಸಬಲ್ಲುದೆಂದು ರಸವಾದಿಗಳು ನಂಬಿದ್ದ ಪದಾರ್ಥ.
  3. ಸಂಜೀವಿನಿ; ಪರಮೌಷಧ; ರಾಜೌಷಧ; ದಿವ್ಯೌಷಧ; ಸರ್ವೌಷಧ; ಎಲ್ಲ ರೋಗಗಳಿಗೂ ಮದ್ದು.
  4. (ಔಷಧಶಾಸ್ತ್ರ) ಸುಗಂಧ ದ್ರಾವಣ; ಔಷಧವಾಗಿ ಯಾ ರುಚಿಕೊಡಲು ಬಳಸುವ ಆಲ್ಕಹಾಲ್‍, ನೀರು ಮತ್ತು ಪರಿಮಳ ದ್ರವ್ಯಗಳ ಮಿಶ್ರಣ.
ಪದಗುಚ್ಛ

elixir of life = elixir(2).