elimination ಇ(ಎ)ಲಿಮಿನೇಷನ್‍
ನಾಮವಾಚಕ
  1. ವರ್ಜನೆ; ಬಿಟ್ಟುಬಿಡುವುದು.
  2. ಹೊರಹಾಕುವಿಕೆ; ಹೊರದೂಡುವಿಕೆ; ವಿಸರ್ಜನೆ:
    1. (ಶರೀರ ವಿಜ್ಞಾನ) ವ್ಯರ್ಥ ಪದಾರ್ಥಗಳನ್ನು ಶರೀರದಿಂದ ಹೊರಕ್ಕೆ ಕಳುಹಿಸುವಿಕೆ.
    2. (ರಸಾಯನವಿಜ್ಞಾನ) ಸಂಯುಕ್ತದಿಂದ ಯಾವುದೇ ಭಾಗವನ್ನು ತೆಗೆದುಹಾಕುವಿಕೆ.
  3. (ಪ್ರಶ್ನೆಯ ಭಾಗ ಮೊದಲಾದವುಗಳ ವಿಷಯದಲ್ಲಿ) ಕಡೆಗಣಿಸುವಿಕೆ; ಬಿಟ್ಟುಬಿಡುವಿಕೆ.
  4. (ಬೀಜಗಣಿತ) ಬಹಿರ್ವಹನ; ಹೊರಹಾಕುವುದು; ಸಮೀಕರಣಗಳನ್ನು ಒಂದರೊಡನೊಂದು ಸೇರಿಸುವ ಮುಖಾಂತರ ಯಾವುದೇ ಪರಿಮಾಣವನ್ನು ತೆಗೆದುಹಾಕುವುದು.
  5. (ಸೋಲಿಸುವುದರ ಮೂಲಕ ಸ್ಪರ್ಧೆ, ಪಂದ್ಯ, ಮೊದಲಾದವುಗಳಿಂದ) ವರ್ಜನ; ತೆಗೆದುಹಾಕುವುದು ; ಹೊರಹಾಕುವುದು.
  6. (ಬಹುವಚನದಲ್ಲಿ) ಮೂತ್ರ, ಮಲ, ಮೊದಲಾದ ವಿಸರ್ಜಿಸಿದ ವಸ್ತುಗಳು.