eliminate ಇ(ಎ)ಲಿಮಿನೇಟ್‍
ಸಕರ್ಮಕ ಕ್ರಿಯಾಪದ
  1. ತೆಗೆದುಹಾಕು; ಕಳೆದುಬಿಡು; ತಳ್ಳಿಬಿಡು; ವರ್ಜಿಸು.
  2. ಹೊರಹಾಕು; ಹೊರದೂಡು; ವಿಸರ್ಜಿಸು:
    1. (ಶರೀರ ವಿಜ್ಞಾನ) ವ್ಯರ್ಥ ಪದಾರ್ಥಗಳನ್ನು ಶರೀರದಿಂದ ಹೊರಕ್ಕೆ ಕಳುಹಿಸು.
    2. (ರಸಾಯನವಿಜ್ಞಾನ) ಸಂಯುಕ್ತದಿಂದ ಯಾವುದೇ ಭಾಗವನ್ನು ತೆಗೆದುಹಾಕು.
  3. (ಪ್ರಶ್ನೆಯ ಭಾಗ ಮೊದಲಾದವನ್ನು ಅಮುಖ್ಯ ಯಾ ಅನಗತ್ಯವೆಂದು) ಗಣನೆಮಾಡದಿರು; ಕಡೆಗಣಿಸು; ಉಪೇಕ್ಷಿಸು; ಲೆಕ್ಕಿಸದಿರು; ಬಿಟ್ಟುಬಿಡು.
  4. (ಬೀಜಗಣಿತ) ತೆಗೆದುಹಾಕು; ಸಮೀಕರಣದಲ್ಲಿನ ಯಾವುದೇ ಪರಿಮಾಣ ಇಲ್ಲದಂತೆ ಮಾಡು: add the two equations and eliminate ‘y’ ಎರಡು ಸಮೀಕರಣಗಳನ್ನೂ ಕೂಡಿ ‘y’ ಅನ್ನು ತೆಗೆದುಹಾಕು.
  5. (ಅನುಚಿತ ಪ್ರಯೋಗ) (ರೂಪಕವಾಗಿ ಸಹ) ಹೊರಸೆಳೆ; ಪ್ರತ್ಯೇಕಿಸು: roots eliminate nitrogen from the soil ಬೇರುಗಳು ಮಣ್ಣಿನಿಂದ ನೈಟ್ರೊಜನ್ನನ್ನು ಪ್ರತ್ಯೇಕಿಸುತ್ತವೆ.
  6. (ಸೋಲಿಸುವುದರ ಮೂಲಕ ಸ್ಪರ್ಧೆ ಮೊದಲಾದವುಗಳಿಂದ) ಹೊರಹಾಕು; ಹೊರದೂಡು.