eliminable ಇ(ಎ)ಲಿಮಿನಬ್‍ಲ್‍
ಗುಣವಾಚಕ
  1. ವರ್ಜ್ಯ; ವರ್ಜನಯೋಗ್ಯ; ತೆಗೆದುಹಾಕಬಹುದಾದ; ಬಿಟ್ಟುಬಿಡಬಹುದಾದ.
  2. ಹೊರಹಾಕಬಲ್ಲ; ಹೊರದೂಡಬಲ್ಲ; ವಿಸರ್ಜನೀಯ:
    1. (ಶರೀರ ವಿಜ್ಞಾನ) (ವ್ಯರ್ಥ ಪದಾರ್ಥಗಳ ವಿಷಯದಲ್ಲಿ) ಅಂಗಾಂಶಗಳಿಂದ ಹೊರಹಾಕಬಹುದಾದ.
    2. (ರಸಾಯನವಿಜ್ಞಾನ) (ಸಂಯುಕ್ತದ ಯಾವುದೇ ಭಾಗದ ವಿಷಯದಲ್ಲಿ) ಸಂಯುಕ್ತದಿಂದ ಹೊರಹಾಕಬಹುದಾದ.
  3. (ಪ್ರಶ್ನೆಯ ಭಾಗ ಮೊದಲಾದವುಗಳ ವಿಷಯದಲ್ಲಿ) ಕಡೆಗಣಿಸಬಹುದಾದ; ನಿರ್ಲಕ್ಷಿಸಬಹುದಾದ; ಉಪೇಕ್ಷಿಸಬಹುದಾದ; ಬಿಟ್ಟುಬಿಡಬಹುದಾದ; ತ್ಯಜಿಸಬಹುದಾದ.
  4. (ಬೀಜಗಣಿತ) (ಯಾವುದೇ ಪರಿಮಾಣದ ವಿಷಯದಲ್ಲಿ) ಸಮೀಕರಣದಿಂದ ತೆಗೆದುಹಾಕಬಹುದಾದ.
  5. (ಅನುಚಿತ ಪ್ರಯೋಗ) ಪ್ರತ್ಯೇಕಿಸಬಹುದಾದ; ಹೊರಸೆಳೆಯಬಹುದಾದ.