elevation ಎಲಿವೇಷನ್‍
ನಾಮವಾಚಕ
  1. ಎತ್ತುವಿಕೆ; ಮೇಲೆತ್ತುವಿಕೆ.
  2. ಮೇಲೆತ್ತಿದ ಸ್ಥಿತಿ; ಉನ್ನತಸ್ಥಿತಿ.
  3. (ರೋಮನ್‍ ಕ್ಯಾತೊಲಿಕರ ಪ್ರಭುಭೋಜನ ವ್ರತದಲ್ಲಿ ಪವಿತ್ರ ಬ್ರೆಡ್ಡನ್ನು ಎಲ್ಲರೂ ಆರಾಧಿಸಲೆಂದು) ಮೇಲಕ್ಕೆತ್ತಿ ಹಿಡಿಯುವುದು.
  4. (ಕಣ್ಣು, ಧ್ವನಿ, ಆಸೆ, ಭರವಸೆ, ಮೊದಲಾದವುಗಳ) ಏರಿಕೆ; ಎತ್ತರಿಸಿಕೆ; ಉತ್ಥಾನ.
  5. (ಬಂದೂಕಿನ ಯಾ ಫಿರಂಗಿಯ) ಅಕ್ಷವನ್ನು ಎತ್ತರಿಸುವುದು.
  6. (ಅಂತಸ್ತು, ದರ್ಜೆ ಮೊದಲಾದವುಗಳ) ಏರಿಕೆ; ಔನ್ನತ್ಯ.
  7. (ಗುರಿ, ಧ್ಯೇಯ, ಉದ್ದೇಶ, ಶೈಲಿ, ಮೊದಲಾದವುಗಳ) ಉತ್ತಮಿಕೆ; ಉತ್ಕರ್ಷಣೆ.
  8. ಉನ್ನತಿ; (ಮುಖ್ಯವಾಗಿ ಬಂದೂಕ ಯಾ ಆಕಾಶಕಾಯದ ದಿಕ್ಕಿನ ವಿಷಯದಲ್ಲಿ) ಬಂದೂಕಕ್ಕೂ ಕ್ಷಿತಿಜೀಯ ರೇಖೆಗೂ ಇರುವ ಕೋನ.
  9. (ಒಂದು ನಿರ್ದಿಷ್ಟ ಮಟ್ಟದ ಮೇಲಿನ, ಮುಖ್ಯವಾಗಿ ಸಮುದ್ರಮಟ್ಟದ ಮೇಲಿನ) ಎತ್ತರ; ಉನ್ನತಿ.
  10. ಉನ್ನತಿ; ಊರ್ಧ್ವ ಸಮತಲದ ಮೇಲೆ ಮಾಡುವ ಕಟ್ಟಡದ ಆತಿ ಯಾ ನಕ್ಷೆ; ಮನೆ ಮೊದಲಾದವುಗಳ ಪಕ್ಕ, ಮುಂಭಾಗ, ಹಿಂಭಾಗಗಳನ್ನು ತೋರಿಸುವ ಚಪ್ಪಟೆ ನಕಾಸೆ.
  11. ಉನ್ನತಿ; ಔನ್ನತ್ಯ; ವೈಭವ; ಉಚ್ಛ್ರಾಯ; ಉತ್ಕರ್ಷ; ಘನತೆ; ಮೇಲ್ಮೆ.
  12. ಎತ್ತರವಾದ ಸ್ಥಳ; ಉನ್ನತ ಸ್ಥಳ.
  13. (ಬ್ಯಾಲೆ) ನೆಗೆತ; ಸ್ನಾಯುಗಳನ್ನು ಬಿಗಿಗೊಳಿಸಿ ಇಡೀ ಶರೀರವನ್ನು ನೆಲದಿಂದ ಮೇಲಕ್ಕೇರಿಸುವ ನೆಗೆತ.