elevate ಎಲಿವೇಟ್‍
ಸಕರ್ಮಕ ಕ್ರಿಯಾಪದ
  1. ಮೇಲೆತ್ತು; ಎತ್ತು; ಮೇಲಕ್ಕೇರಿಸು.
  2. (ರೋಮನ್‍ ಕ್ಯಾಥೊಲಿಕ್‍ರ ಪ್ರಭುಭೋಜನದಲ್ಲಿಯ ಪವಿತ್ರ ಬ್ರೆಡ್ಡನ್ನು ಎಲ್ಲರೂ ಆರಾಧಿಸಲೆಂದು) ಮೇಲಕ್ಕೆತ್ತಿ ಹಿಡಿ.
  3. (ಕಣ್ಣು, ಧ್ವನಿ, ಆಸೆ, ಭರವಸೆ, ಮೊದಲಾದವನ್ನು) ಮೇಲಕ್ಕೆತ್ತು; ಏರಿಸು; ಎತ್ತರಿಸು.
  4. (ಬಂದೂಕಿನ, ಫಿರಂಗಿಯ) ಅಕ್ಷವನ್ನು ಎತ್ತರಿಸು.
  5. (ಅಂತಸ್ತು, ದರ್ಜೆ, ಮೊದಲಾದವನ್ನು) ಮೇಲ್ಪಡಿಸು; ಹೆಚ್ಚಿಸು; ಉನ್ನತಗೊಳಿಸು.
  6. (ಮುಖ್ಯವಾಗಿ ಭೂತಕೃದಂತದಲ್ಲಿ) (ಗುರಿ, ಧ್ಯೇಯ, ಉದ್ದೇಶ, ಶೈಲಿ, ಮೊದಲಾದವನ್ನು ನೈತಿಕವಾಗಿ ಯಾ ಬೌದ್ಧಿಕವಾಗಿ) ಮೇಲೆತ್ತು; ಉತ್ತಮಗೊಳಿಸು; ಉನ್ನತಗೊಳಿಸು; ಉತ್ಕರ್ಷಗೊಳಿಸು (ಮುಖ್ಯವಾಗಿ ಭೂತಕೃದಂತದಲ್ಲಿ).
  7. (ಆಡುಮಾತು) (ಭೂತಕೃದಂತದಲ್ಲಿ) ಸ್ವಲ್ಪ ಕುಡಿಸು; ಮತ್ತೇರಿಸು.
  8. (ರೈಲುಕಂಬಿ, ಮೊದಲಾದವನ್ನು) ನೆಲದ ಮಟ್ಟದಿಂದ ಎತ್ತರಿಸು.