electronic ಇ(ಎ)ಲೆಕ್ಟ್ರಾನಿಕ್‍
ಗುಣವಾಚಕ
  1. (ಭೌತವಿಜ್ಞಾನ, ರಸಾಯನವಿಜ್ಞಾನ) ಇಲೆಕ್ಟ್ರಾನಿಕ್‍:
    1. ಇಲೆಕ್ಟ್ರಾನಿನ, ಅದಕ್ಕೆ ಸಂಬಂಧಿಸಿದ.
    2. ಇಲೆಕ್ಟ್ರಾನಿಕ್‍ ಶಾಸ್ತ್ರದ, ಅದಕ್ಕೆ ಸಂಬಂಧಿಸಿದ.
  2. (ಸಂಗೀತದ ವಿಷಯದಲ್ಲಿ) ಇಲೆಕ್ಟ್ರಾನ್‍ಜನ್ಯ; ಇಲೆಕ್ಟ್ರಾನ್‍ ಜನಿತ; ವಿದ್ಯುಜ್ಜನಿತ; ಕೊಳವೆ, ತಂತಿ, ಮೊದಲಾದವುಗಳಿಲ್ಲದೆ, ಇಲೆಕ್ಟ್ರಾನ್‍ ಯಾ ವಿದ್ಯುತ್ತಿನಿಂದ ಉತ್ಪತ್ತಿಯಾಗುವ.
  3. (ಸಂಗೀತ ವಾದ್ಯಗಳ ವಿಷಯದಲ್ಲಿ) ಇಲೆಕ್ಟ್ರಾನ್‍ ಚಾಲಿತ; ವಿದ್ಯುಚ್ಚಾಲಿತ; ಇಲೆಕ್ಟ್ರಾನ್‍ ಯಾ ವಿದ್ಯುತ್ತಿನಿಂದ ನಡೆಯುವ.