electricity ಇ(ಎ)ಲೆಕ್ಟ್ರಿಸಿಟಿ
ನಾಮವಾಚಕ
  1. ವಿದ್ಯುತ್ತು; ಯಾವುದೇ ವಸ್ತುವ್ಯವಸ್ಥೆಯಲ್ಲಿ ಇಲೆಕ್ಟ್ರಾನುಗಳ ಹೆಚ್ಚಳ ಯಾ ಕೊರತೆಯ ಕಾರಣ, ಕ್ರಮವಾಗಿ ಋಣ ಮತ್ತು ಧನ ಎಂಬ ಎರಡು ಬಗೆಯಲ್ಲಿ ಮೈದೋರುವ ಒಂದು ಬಗೆಯ ಭೌತ ಅಸ್ತಿತ್ವ.
  2. ವಿದ್ಯುತ್‍ ಪ್ರವಾಹ; ದೀಪ ಮೊದಲಾದವುಗಳಿಗೆ ವಿದ್ಯುತ್‍ ಪೂರೈಕೆ.
  3. ವಿದ್ಯುತ್‍ ಶಾಸ್ತ್ರ; ವಿದ್ಯುತ್ತಿಗೆ ಸಂಬಂಧಿಸಿದ ಶಾಸ್ತ್ರ.
ಪದಗುಚ್ಛ
  1. frictional electricity ಘರ್ಷಣೆ ವಿದ್ಯುತ್ತು; ಪದಾರ್ಥಗಳ ನಡುವಣ ಘರ್ಷಣೆಯಿಂದ ಉಂಟಾಗುವ ವಿದ್ಯುತ್ತು.
  2. galvanic electricity ಗ್ಯಾಲ್ವನಿಕ ವಿದ್ಯುತ್ತು; ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾದ ವಿದ್ಯುತ್ತು.
  3. magnetic electricity ಕಾಂತತಾ ವಿದ್ಯುತ್ತು; ಕಾಂತತೆಯಿಂದ ಉತ್ಪತ್ತಿಯಾದ ವಿದ್ಯುತ್ತು.
  4. resinous electricity ರಾಳ ವಿದ್ಯುತ್ತು; ರಾಳದಲ್ಲಿ ಉತ್ಪತ್ತಿಮಾಡಿದ ವಿದ್ಯುತ್ತು.
  5. static electricity ಸ್ಥಿತಿವಿದ್ಯುತ್ತು; ಹರಿಯದೆ ಒಂದು ಸ್ಥಳಕ್ಕೆ ಸೀಮಿತವಾಗಿರುವ ವಿದ್ಯುತ್ತು.
  6. thermal electricity ಉಷ್ಣ ವಿದ್ಯುತ್ತು; ಉಷ್ಣದಿಂದ ಉತ್ಪತ್ತಿಯಾದ ವಿದ್ಯುತ್ತು.
  7. vitreous electricity ಗಾಜು ವಿದ್ಯುತ್ತು; ಗಾಜಿನಲ್ಲಿ ಉತ್ಪತ್ತಿ ಮಾಡಿದ ವಿದ್ಯುತ್ತು.