See also 2elect
1elect ಇಲೆಕ್ಟ್‍
ಗುಣವಾಚಕ
  1. ಆಯ್ದ; ಆರಿಸಿಕೊಂಡ; ಆಯ್ದುಕೊಂಡ; ಹೆಕ್ಕಿತೆಗೆದ.
  2. ಆಯ್ದ; ಶ್ರೇಷ್ಠವೆಂದು ಆಯ್ದು ತೆಗೆದ: an elect group ಆಯ್ದು ತೆಗೆದ ಮಂಡಲಿ, ಕೂಟ.
  3. (ದೇವತಾಶಾಸ್ತ್ರ) ಮೋಕ್ಷ ಪ್ರಧಾನ ಮಾಡಲು ದೇವರು ಆರಿಸಿ ತೆಗೆದ: the elect ಮುಕ್ತಿಯೋಗ್ಯರು; ಮೋಕ್ಷಪ್ರದಾನ ಮಾಡಲು ದೇವರು ಆರಿಸಿ ತೆಗೆದ ಆತ್ಮಗಳು.
  4. (ಪದವಿ, ಹುದ್ದೆ, ಮೊದಲಾದವಕ್ಕೆ) ನೇಮಿಸಲು ಆರಿಸಿದ, ಚುನಾಯಿಸಿದ: president elect ಅಧ್ಯಕ್ಷ ಪದವಿಗೆ ಚುನಾಯಿಸಿದ, ಆದರೆ ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲದ, ಅಧ್ಯಕ್ಷ.
ಪದಗುಚ್ಛ

bride elect (ಮದುವೆಗೆ) ಗೊತ್ತಾದ ಹೆಣ್ಣು; ನಿಶ್ಚಿತ ವಧು.

See also 1elect
2elect ಇಲೆಕ್ಟ್‍
ಸಕರ್ಮಕ ಕ್ರಿಯಾಪದ
  1. ವಸ್ತುವನ್ನು ಯಾ ವಿಷಯವನ್ನು ಆರಿಸು, ಆರಿಸಿಕೊ.
  2. (ಮಾಡಲು ಯಾವುದೇ ಕೆಲಸ) ಆರಿಸಿಕೊ; ಆಯ್ದುಕೊ.
  3. ವ್ಯಕ್ತಿಯನ್ನು ಮತದಾನದ ಮೂಲಕ ಆರಿಸು, ಚುನಾಯಿಸು: elect a magistrate ದಂಡಾಧಿಕಾರಿಯನ್ನು ಚುನಾಯಿಸು.
  4. (ದೇವತಾಶಾಸ್ತ್ರ) (ದೇವರ ವಿಷಯದಲ್ಲಿ) ಮೋಕ್ಷಕ್ಕಾಗಿ, ಅನುಗ್ರಹಕ್ಕಾಗಿ ಯಾ ಉದ್ಧಾರ ಮಾಡುವುದಕ್ಕಾಗಿ (ಉಳಿದವರನ್ನು ಬಿಟ್ಟು ಕೆಲವು ವ್ಯಕ್ತಿಗಳನ್ನು) ಆರಿಸು.