See also 2elder  3elder
1elder ಎಲ್ಡರ್‍
ಗುಣವಾಚಕ

(ಇಬ್ಬರು ಸಂಬಂಧಿಗಳಲ್ಲಿ ಯಾ ನಿರ್ದಿಷ್ಟ ವ್ಯಕ್ತಿಗಳಲ್ಲಿ) ದೊಡ್ಡವನು; ಹಿರಿಯ; ಜ್ಯೇಷ್ಠ: elder brother ಅವನ ಅಣ್ಣ. which is the elder ಹಿರಿಯವನು ಯಾರು?

ಪದಗುಚ್ಛ

elder brother (of Trinity House) (ಬ್ರಿಟಿಷ್‍ ಪ್ರಯೋಗ) ನೌಕಾವ್ಯವಹಾರಗಳಲ್ಲಿ ಪಂಚಾಯಿತರಾಗಿ ಕೆಲಸಮಾಡುವ, ಇಂಗ್ಲಂಡಿನ ಟ್ರಿನಿಟಿಹೌಸ್‍ ಎಂಬ ಸಂಸ್ಥೆಯ ಹದಿಮೂರು ಹಿರಿಯ ಸದಸ್ಯರಲ್ಲಿ ಒಬ್ಬ (ಸಾಮಾನ್ಯವಾಗಿ ಬಹುವಚನ brethren).

See also 1elder  3elder
2elder ಎಲ್ಡರ್‍
ನಾಮವಾಚಕ
  1. (ಬಹುವಚನದಲ್ಲಿ) ಹಿರಿಯರು; ದೊಡ್ಡವರು; ವೃದ್ಧರು: respect your elders ಹಿರಿಯರನ್ನು ಗೌರವದಿಂದ ಕಾಣು.
  2. ಹಿರಿಯ ವೃದ್ಧ; ವಯಸ್ಸಾದವ; ವಯೋದ್ಧ.
  3. (ಚರಿತ್ರೆ) ಸೆನೆಟ್‍ ಸಭೆಯ ಯಾ ಆಡಳಿತ ಮಂಡಲಿಯ ಸದಸ್ಯ.
  4. ಚರ್ಚುಹಿರಿಯ; ಇಗರ್ಜಿದ್ಧ; ಆದಿ ಕಾಲದ ಕ್ರಿಶ್ಚಿಯನ್‍ ಚರ್ಚಿನ ಮತ್ತು ಕೆಲವು ಪ್ರಾಟೆಸ್ಟಂಟ್‍ ಚರ್ಚುಗಳ, ಮುಖ್ಯವಾಗಿ ಪ್ರೆಸ್ಬಿಟೇರಿಯನ್‍ ಚರ್ಚುಗಳ, ಒಬ್ಬ ಅಧಿಕಾರಿ.
See also 1elder  2elder
3elder ಎಲ್ಡರ್‍
ನಾಮವಾಚಕ

ಎಲ್ಡರ್‍; ಸ್ಯಾಂಬಕಸ್‍ ಕುಲಕ್ಕೆ ಸೇರಿದ, ಬಿಳಿಯ ಹೂ ಬಿಡುವ, ಕಪ್ಪು ಯಾ ಕೆಂಪು ಬಣ್ಣದ ಹಣ್ಣು ಬಿಡುವ, ಗಿಡ, ಮರ, ಪೊದೆ ಯಾ ಕುರುಚಲು ಗಿಡ.