See also 2elaborate
1elaborate ಇಲ್ಯಾಬರಟ್‍
ಗುಣವಾಚಕ
  1. ಎಚ್ಚರಿಕೆಯಿಂದ ಯಾ ಬಹಳ ವಿವರವಾಗಿ ಪರ್ಯಾಲೋಚಿಸಿ ಮಾಡಿದ; ಸೂಕ್ಷ್ಮ ಪರಿಶೀಲನೆಯಿಂದ ಮಾಡಿದ.
  2. ಅತ್ಯುತ್ತಮವಾಗಿ ಪರಿಷ್ಕರಿಸಿದ, ನಯಗೊಳಿಸಿದ.
  3. ವಿಸ್ತಾರವಾದ; ಬಹಳ ವಿವರವಾದ; ಸುದೀರ್ಘವಾದ; ಜಟಿಲವಾದ; ಸಂಕೀರ್ಣವಾದ; ವಿವರಗಳಿಂದ ತುಂಬಿದ; ವಿಸ್ತಾರವಾಗಿ — ಬೆಳೆಸಿದ, ನಿರೂಪಿಸಿದ, ಮಾಡಿದ.
See also 1elaborate
2elaborate ಇಲ್ಯಾಬರಟ್‍
ಸಕರ್ಮಕ ಕ್ರಿಯಾಪದ
  1. ಪರಿಶ್ರಮದಿಂದ ಉತ್ಪಾದಿಸು; ಕಷ್ಟಪಟ್ಟು, ಪ್ರಯತ್ನದಿಂದ ಉಂಟುಮಾಡು.
  2. (ಹೊಸವಿಚಾರ, ಕಲ್ಪನೆ, ಸಂಶೋಧನೆ, ಮೊದಲಾದವನ್ನು) ವಿವರಿಸು; ವಿಸ್ತಾರವಾಗಿ ಬೆಳಸು; ವಿಶದೀಕರಿಸು; ದೀರ್ಘ ವಿವರಣೆಕೊಡು.
  3. (ನೈಸರ್ಗಿಕ ಶಕ್ತಿಯ ವಿಷಯದಲ್ಲಿ) ತನ್ನ ಮೂಲಧಾತು ಯಾ ಇನ್ನಾವುದೇ ಆಕರಗಳಿಂದ (ಬೇಕಾದ ಪದಾರ್ಥಗಳನ್ನು) ಉತ್ಪತ್ತಿಮಾಡು, ಉತ್ಪಾದಿಸು.
ಅಕರ್ಮಕ ಕ್ರಿಯಾಪದ

ವಿವರಿಸು; ವಿವರವಾಗಿ ನಿರೂಪಿಸು; ವಿಶದವಾಗಿ — ತಿಳಿಸು, ವರ್ಣಿಸು, ಹೇಳು: I need not elaborate ನಾನು ವಿವರವಾಗಿ ಹೇಳಬೇಕಾಗಿಲ್ಲ.