See also 2either  3either  4either
1either ಐ(ಈ)ದರ್‍
ಗುಣವಾಚಕ
  1. ಎರಡರಲ್ಲಿ ಒಂದೊಂದೂ; ಪ್ರತಿಯೊಂದೂ; ಎರಡೂ: at either end was a lamp ಪ್ರತಿ ಕೊನೆ (ಎರಡೂಕಡೆ)ಯಲ್ಲಿಯೂ ಒಂದು ದೀಪವಿತ್ತು. either view is tenable ಎರಡೂ ಅಭಿಪ್ರಾಯ ಸಾಧುವೇ. either is tenable ಎರಡೂ ಒಪ್ಪತಕ್ಕದೇ.
  2. ಎರಡರಲ್ಲಿ ಯಾವುದಾದರೂ ಒಂದು; ಇಬ್ಬರಲ್ಲಿ ಯಾರಾದರೂ ಒಬ್ಬರು: put the lamp at either end ದೀಪವನ್ನು ಯಾವುದಾದರೂ ಒಂದು ಕೊನೆಯಲ್ಲಿ ಇಡು.
See also 1either  3either  4either
2either ಐ(ಈ)ದರ್‍
ಸರ್ವನಾಮ
  1. (ಎರಡರಲ್ಲಿ) ಯಾವುದಾದರೂ ಒಂದು; (ಇಬ್ಬರಲ್ಲಿ) ಯಾರಾದರೂ ಒಬ್ಬರು: either of you can go ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೋಗಬಹುದು.
  2. (ಎರಡರಲ್ಲಿ) ಒಂದೊಂದೂ; ಪ್ರತಿಯೊಂದೂ; (ಇಬ್ಬರಲ್ಲಿ) ಪ್ರತಿಯೊಬ್ಬರೂ: either of these events ಈ ಘಟನೆಗಳಲ್ಲಿ ಒಂದೊಂದೂ.
See also 1either  2either  4either
3either ಐ(ಈ)ದರ್‍
ಕ್ರಿಯಾವಿಶೇಷಣ
  1. ಎರಡು ಊಹೆಗಳಲ್ಲಿ ಒಂದು ಆಗಿರುವಂತೆ; ಅಂತೆ ಅಥವಾ ಇಲ್ಲವಾದಲ್ಲಿ; (ನಿನಗೆ) ಹೇಗೆ ಬೇಕೋ ಹಾಗೆ; (ನಿನಗೆ) ಹಿಡಿಸಿದಂತೆ: he is either drunk or mad ಒಂದೋ ಅವನು ಕುಡಿದಿದ್ದಾನೆ, ಇಲ್ಲ ಅವನಿಗೆ ಹುಚ್ಚು. either come in or go out ಒಳಕ್ಕೆ ಬಾ, ಇಲ್ಲ ಹೊರಕ್ಕೆ ಹೋಗು.
  2. (ನಿಷೇಧಾರ್ಥಕ ಯಾ ಪ್ರಶ್ನಾರ್ಥಕ ವಾಕ್ಯಗಳಲ್ಲಿ) ಸಹ; ಕೂಡ.
  3. ಅದಲ್ಲದೆ; ಜೊತೆಗೆ.
See also 1either  2either  3either
4either ಐ(ಈ)ದರ್‍
ಸಂಯೋಜಕಾವ್ಯಯ
  1. ಸಹ; ಕೂಡ: if you do not go, I shall not go either ನೀನು ಹೋಗದಿದ್ದರೆ ನಾನೂ ಹೋಗುವುದಿಲ್ಲ.
  2. ಜೊತೆಗೆ; ಅದಲ್ಲದೆ; ಅಷ್ಟಲ್ಲದೆ; ಇನ್ನೂ; ಮೇಲಾಗಿ: there is no time to lose either ಅದಲ್ಲದೆ ಕಳೆಯಲು ಸಮಯವೂ ಇಲ್ಲ.