See also 2egocentric
1egocentric ಎ(ಈ)ಗೋಸೆಂಟ್ರಿಕ್‍
ಗುಣವಾಚಕ
  1. ವ್ಯಕ್ತಿಕೇಂದ್ರಿತ; ವ್ಯಕ್ತಿಬದ್ಧ; ವ್ಯಕ್ತಿನಿಷ್ಠ; ಸಮಾಜಕ್ಕಿಂತ ಹೆಚ್ಚಾಗಿ ವ್ಯಕ್ತಿಗೆ ಸಂಬಂಧಿಸಿದ.
  2. (ತತ್ತ್ವಶಾಸ್ತ್ರ) ಸ್ವಾತ್ಮಕೇಂದ್ರಿತ; ಸ್ವಕೇಂದ್ರಿತ; ಜ್ಞಾತವಾದ ಜಗತ್ತಿಗೆಲ್ಲ ತಾನೇ ಕೇಂದ್ರವೆಂದು ಭಾವಿಸುವ.
  3. (ಲಘುವಾಗಿ) ಸ್ವಾರ್ಥದ; ಸ್ವಾರ್ಥಪರ; ಸ್ವಹಿತಕ್ಕೆ ಮಹತ್ವಕೊಟ್ಟು ಪರಹಿತವನ್ನು ಕಡೆಗಣಿಸುವ.
  4. ಅಹಂಕಾರದ; ಅಹಂಭಾವದ; ಸ್ವಪ್ರತಿಷ್ಠೆಯ.
See also 1egocentric
2egocentric ಎ(ಈ)ಗೋಸೆಂಟ್ರಿಕ್‍
ನಾಮವಾಚಕ
  1. ಅಹಂಭಾವದ ಮನುಷ್ಯ; ಸ್ವಪ್ರತಿಷ್ಠಿತ ವ್ಯಕ್ತಿ.
  2. ಸ್ವಾರ್ಥಿ; ಸ್ವಾರ್ಥಸಾಧಕ; ಸ್ವಹಿತಕ್ಕೇ ಮಹತ್ವ ಕೊಟ್ಟು ಪರಹಿತವನ್ನು ಕಡೆಗಣಿಸುವವನು.