ego ಈ(ಎ)ಗೋ
ನಾಮವಾಚಕ

(ಬಹುವಚನ egos).

  1. (ಜ್ಞೇಯ ವಿಷಯವಲ್ಲದ) ಜ್ಞಾತೃ; ವಿಷಯಿ; ಅಹಂ; (ಯಾವುದನ್ನು ಕುರಿತು ಚಿಂತಿಸುತ್ತೇವೋ ಅದರಿಂದ ಭಿನ್ನವಾದ, ಯಾವುದು ಅದನ್ನು ಕುರಿತು ಚಿಂತಿಸುತ್ತದೆಯೋ ಆ) ನಾನು.
  2. (ಮನಶ್ಶಾಸ್ತ್ರ) ಅಹಂ; ಅಹಂತೆ; ವ್ಯವಸ್ಥಿತವಾಗಿದ್ದು, ತನ್ನ ವ್ಯಕ್ತಿತ್ವದ ಅರಿವನ್ನು ಪಡೆದಿರುವ, ಮನಸ್ಸಿನ ಭಾಗ, ಸ್ತರ; ‘ಇಡ್‍’ ಯಾ ಮನುಷ್ಯನ ಮೂಲಭೂತ ಸಹಜ ಪ್ರತ್ತಿಗಳಿಂದ ಭಿನ್ನವಾದುದು.
  3. (ಲಘುವಾಗಿ) ಅಹಂಕಾರ; ಗರ್ವ; ಜಂಬ; ಪ್ರತಿಷ್ಠೆ: her ego becomes unbearable each day ದಿನದಿನಕ್ಕೂ ಅವಳ ಅಹಂಕಾರ ಅಸಹನೀಯವಾಗುತ್ತಿದೆ.
  4. (ಲಘುವಾಗಿ) ಸ್ವಾಭಿಮಾನ; ಆತ್ಮಗೌರವ: your criticism injured her ego ನಿನ್ನ ಟೀಕೆ ಅವಳ ಸ್ವಾಭಿಮಾನವನ್ನು ಚುಚ್ಚಿತು.