See also 2effect
1effect ಇಹೆಕ್ಟ್‍
ನಾಮವಾಚಕ
  1. ಫಲ; ಫಲಿತಾಂಶ; ಪರಿಣಾಮ; ಕಾರ್ಯ.
  2. ಪರಿಣಾಮಕಾರಿತ್ವ; ಪ್ರಭಾವ; ಪರಿಣಾಮ; ಫಲ; ಉಪಯೋಗ; ಪ್ರಯೋಜನ: of no effect ಪರಿಣಾಮ ಮಾಡದ; ಉಪಯೋಗವಿಲ್ಲದ; ಪ್ರಯೋಜನರಹಿತ.
  3. (ಚಿತ್ರ ಮೊದಲಾದವುಗಳಲ್ಲಿ ವರ್ಣಗಳ ಯಾ ಆತಿಗಳ) ಸಂಯೋಜನೆ; ಹೊಂದಾವಣೆ; ಹೊಂದಿಕೆ; ಸಾಮರಸ್ಯ: a pretty effect ಸುಂದರವಾದ ಹೊಂದಾವಣೆ.
  4. (ಬಹುವಚನದಲ್ಲಿ) ಆಸ್ತಿ; ಚರ ಆಸ್ತಿ; ಬ್ಯಾಂಕಿನಲ್ಲಿರುವ (ಸ್ವಂತ) ಹಣ: personal effects ಸ್ವಂತ ಆಸ್ತಿ.
  5. ಪರಿಣಾಮ; ಪ್ರಭಾವ; ಪ್ರೇಕ್ಷಕ ಯಾ ಶ್ರೋವಿನ ಮೇಲೆ ಆಗುವ ಪರಿಣಾಮ: calculated for effect ಪರಿಣಾಮವನ್ನುಂಟು ಮಾಡಲು ಉದ್ದೇಶಿಸಿದ.
  6. ವಿಶೇಷ ಪರಿಣಾಮ; ನಾಟಕ, ಸಿನಿಮಾ ಯಾ ರೇಡಿಯೋ ಪ್ರಸರಣಗಳ ಜೊತೆಯಲ್ಲಿ ಬಳಸುವ ಮಿಂಚು, ಗುಡುಗು, ಧ್ವನಿಗಳು, ಮೊದಲಾದವು.
  7. (ಭೌತವಿಜ್ಞಾನ) ಪರಿಣಾಮ; ಯಾವುದೇ ಕಾರ್ಯಕಾರಣ ಸಂಬಂಧವನ್ನು ನಿರೂಪಿಸುವ (ಸಾಮಾನ್ಯವಾಗಿ ಕಂಡುಹಿಡಿದ ವಿಜ್ಞಾನಿಯ ಹೆಸರಿನಿಂದ ಕರೆದಿರುವ) ಸಂಗತಿ: Doppler effect ಡಾಪ್ಲರ್‍ ಪರಿಣಾಮ.
  8. ಕಾರ್ಯಕಾರಿತ್ವ; ಜಾರಿ; ಚಲಾವಣೆ; ಕಾರ್ಯಗತಗೊಳಿಸುವುದು; ಕಾರ್ಯರೂಪಕ್ಕೆ, ಜಾರಿಗೆ ತರುವುದು: the committees’s recommendations were quickly given effect ಸಮಿತಿಯ ಶಿಫಾರಸ್ಸುಗಳನ್ನು ಬೇಗ ಕಾರ್ಯಗತಗೊಳಿಸಲಾಯಿತು, ಜಾರಿಗೆ ತರಲಾಯಿತು.
ಪದಗುಚ್ಛ
  1. cause and effect ಕಾರ್ಯಕಾರಣ ಭಾವ.
  2. in effect
    1. ನಿಜವಾಗಿ ನೋಡಿದರೆ; ವಸ್ತುತಃ; ಕಾರ್ಯತಃ; ತತ್ತ್ವತಃ; ವಾಸ್ತವವಾಗಿ.
    2. (ಕಾನೂನು, ನಿಯಮ, ಮೊದಲಾದವುಗಳ ವಿಷಯದಲ್ಲಿ) ಚಲಾವಣೆಯಲ್ಲಿರುವ; ಜಾರಿಯಲ್ಲಿರುವ.
  3. no effects (ಚೆಕ್ಕನ್ನು ಮಾನ್ಯಮಾಡದೆ ಇರುವಾಗ ಬ್ಯಾಂಕಿನವರು ಬರೆಯುವ ಒಕ್ಕಣೆ) ಠೇವಣಿ ಇಲ್ಲ; ಹಣವಿಲ್ಲ.
  4. to that effect
    1. ಆ ಪರಿಣಾಮದ; ಆ ಪರಿಣಾಮವಿರುವ.
    2. ಆ ಸೂಚನೆಯುಳ್ಳ; ಆ ಇಂಗಿತವಿರುವ.
  5. to the same effect ಅದೇ ಅರ್ಥದ, ಅರ್ಥವಿರುವ: I told him and wrote a letter to the same effect ಅವನಿಗೆ ಹೇಳಿದೆ ಮತ್ತು ಅದೇ ಅರ್ಥಕೊಡುವ ಕಾಗದ ಬರೆದೆ.
ನುಡಿಗಟ್ಟು
  1. bring into effect ನೆರವೇರಿಸು; ನಿರ್ವಹಿಸು; ನಡೆಸು; ಕೈಗೂಡಿಸು; ಕಾರ್ಯರೂಪಕ್ಕೆ ತರು; ಕಾರ್ಯಗತ ಮಾಡು.
  2. carry into effect = ನುಡಿಗಟ್ಟು \((1)\).
  3. come into effect ಜಾರಿಗೆ ಬರು; ಕಾರ್ಯಗತವಾಗು.
  4. give effect to ಕಾರ್ಯರೂಪಕ್ಕೆ ತರು; ಜಾರಿಗೆ ತರು; ಕಾರ್ಯಗತಗೊಳಿಸು; ಆಚರಣೆಗೆ, ಬಳಕೆಗೆ ತರು.
  5. take effect ಜಾರಿಗೆ ಬರು; ಕಾರ್ಯರೂಪಕ್ಕೆ ಬರು; ಕಾರ್ಯಗತವಾಗು.
  6. with effect from (ಗೊತ್ತುಪಡಿಸಿದ ಕಾಲದಿಂದ) ಜಾರಿಗೆ ಬರುವ.
See also 1effect
2effect ಇಹೆಕ್ಟ್‍
ಸಕರ್ಮಕ ಕ್ರಿಯಾಪದ
  1. ಆಗಿಸು; ಉಂಟುಮಾಡು; ಆಗಮಾಡು.
  2. ಸಾಧಿಸು; ನೆರವೇರಿಸು.
  3. ಕಾರ್ಯರೂಪಕ್ಕೆ ತರು; ಕಾರ್ಯಗತಮಾಡು; ಜಾರಿಗೊಳಿಸು; ಆಚರಣೆಗೆ ತರು.
ಪದಗುಚ್ಛ

effect a policy of insurance ವಿಮೆ ಮಾಡು; ಒಂದು ವಿಮೆ ಪಾಲಿಸಿ ತೆಗೆದುಕೊ.