educe ಇಡ್ಯೂಸ್‍
ಸಕರ್ಮಕ ಕ್ರಿಯಾಪದ
  1. (ಅವ್ಯಕ್ತ ಸ್ಥಿತಿಯಲ್ಲಿರುವುದನ್ನು) ಹೊರಡಿಸು; ಹೊರಹೊಮ್ಮಿಸು; ಪ್ರಕಾಶಕ್ಕೆ ತರು; ಬೆಳಕಿಗೆ ತರು; ವಿಕಾಸಗೊಳಿಸು.
  2. (ರಸಾಯನವಿಜ್ಞಾನ) ಬಿಡಿಸು; ಬೇರ್ಪಡಿಸು; (ಯಾವುದೇ ಪದಾರ್ಥವನ್ನು) ರಾಸಾಯನಿಕ ಸಂಯೋಗದಿಂದ ಬಿಡಿಸು.
  3. (ಕೊಟ್ಟ ಆಧಾರಗಳಿಂದ ಸಂಖ್ಯೆಯನ್ನು, ತತ್ತ್ವವನ್ನು) ಹೊರಡಿಸು; ಊಹಿಸು; ತರ್ಕಿಸಿ ತೆಗೆ; ಅನುಮಾನ ಮಾಡು.