educate ಎಡ್ಯೂ(ಡ್ಯು)ಕೇಟ್‍, ಎಜೂ(ಜು)ಕೇಟ್‍
ಸಕರ್ಮಕ ಕ್ರಿಯಾಪದ
  1. (ಎಳೆಯರನ್ನು) ಬೆಳೆಸು; ಪಾಲಿಸು; ಸಾಕಿಸಲಹು.
  2. (ಮಾನಸಿಕ, ನೈತಿಕ) ಶಿಕ್ಷಣ ನೀಡು; ತರಬೇತಿಕೊಡು; ತಯಾರಿಕೊಡು.
  3. ವಿದ್ಯೆಕಲಿಸು; ವಿದ್ಯಾಭ್ಯಾಸ ನೀಡು; ಶಾಲೆಗೆ ಹಾಕು, ಕಳುಹಿಸು.
  4. (ಒಬ್ಬನನ್ನು) ತಿದ್ದು; ತಯಾರುಮಾಡು.
  5. (ವ್ಯಕ್ತಿಯ ಶಕ್ತಿ ಯಾ ಸಾಮರ್ಥ್ಯವನ್ನು) ಬೆಳೆಸು; ಅಭಿವೃದ್ಧಿಗೊಳಿಸು.
  6. (ವ್ಯಕ್ತಿಯನ್ನು) ಹದಗೊಳಿಸು; ಸಂಸ್ಕಾರಗೊಳಿಸು: our ears are educated to music ನಮ್ಮ ಕಿವಿಗಳು ಸಂಗೀತದ ಸಂಸ್ಕಾರಪಡೆದಿವೆ.
  7. (ಒಂದು ಕೆಲಸ ಯಾ ತ್ತಿಯನ್ನು) ಕಲಿಸು; ಹೇಳಿಕೊಡು: to educate physically handicapped children for useful work ಅಂಗವಿಕಲ ಮಕ್ಕಳಿಗೆ ಉಪಯುಕ್ತ ಕೆಲಸ ಕಲಿಸುವುದಕ್ಕೆ.
  8. (ಗಾದಿಗಳನ್ನು) ಪಳಗಿಸು; ತರಬೇತುಮಾಡು.
ಪದಗುಚ್ಛ

educated guess ಅನುಭವದ ಊಹೆ; ಹಿಂದಿನ ಅನುಭವದ ಸಹಾಯದಿಂದ ಮಾಡಬಹುದಾದ ಊಹೆ.