economize ಇಕಾನಮೈಸ್‍
ಸಕರ್ಮಕ ಕ್ರಿಯಾಪದ
  1. ಹಾಳತವಾಗಿ ಬಳಸು; ಹಿಡಿತದಿಂದ ಬಳಸು; ಮಿತವಾಗಿ ಖರ್ಚುಮಾಡು; ಒಪ್ಪವಾಗಿ ಖರ್ಚುಮಾಡು.
  2. ಹೆಚ್ಚು ಉಪಯೋಗವಾಗುವಂತೆ ನಿರ್ವಹಿಸು.
ಅಕರ್ಮಕ ಕ್ರಿಯಾಪದ

ಮಿತವ್ಯಯಗೊಳಿಸು; ಖರ್ಚು ಕಡಮೆಮಾಡು; ಖರ್ಚು ತಗ್ಗಿಸು: it was necessary to economize in the running of the machine ಯಂತ್ರವನ್ನು ನಡೆಸುವುದರಲ್ಲಿ ಮಿತವ್ಯಯಗೊಳಿಸಬೇಕಾಯಿತು.

ಪದಗುಚ್ಛ

economize on ಮಿತವಾಗಿ ಬಳಸು; ಮಿತವ್ಯ ಮಾಡು.