See also 2echelon
1echelon ಎ(ಏ)ಷಲಾನ್‍
ನಾಮವಾಚಕ
  1. ಮೆಟ್ಟಿಲುಸಾಲು; ಮೆಟ್ಟಿಲುಜೋಡಣೆ; ಹಂತರಚನೆ; ಸೋಪಾನವ್ಯೂಹ; ಸೋಪಾನಪಂಕ್ತಿ; ಪರಸ್ಪರ ಸಮಾನಾಂತರವಾಗಿ ಮತ್ತು ಸೈನಿಕದಳಗಳನ್ನು ಪ್ರತಿಯೊಂದರ ಕೊನೆಯೂ ಅದರ ಮುಂದಿನ ಮತ್ತು ಹಿಂದಿನ ದಳಗಳಿಂದ ಸ್ಪಷ್ಟವಾಗಿ ಪ್ರತ್ಯೇಕವಾಗಿರುವಂತೆ ಮೆಟ್ಟಿಲುಮೆಟ್ಟಿಲಾಗಿ ಜೋಡಿಸಿರುವ ರಚನೆ.
  2. ಸೋಪಾನಪಂಕ್ತಿ; ಮೆಟ್ಟಿಲುಸಾಲು; ಇದೇ ರೀತಿಯಲ್ಲಿ ಜೋಡಿಸಿರುವ ವಸ್ತುಗಳು (ಮುಖ್ಯವಾಗಿ ಹಡಗುಗಳು).
  3. (ಸಾಮಗ್ರಿಗಳ ಯಾ ಯಂತ್ರೋಪಕರಣಗಳ) ಸರಬರಾಜಿನ ಪ್ರಧಾನ ವಿಭಾಗ.
  4. ಅಧಿಕಾರವರ್ಗ; ಯಾವುದೇ ಸಂಸ್ಥೆಯಲ್ಲಿ ಯಾ ಸಂಘದಲ್ಲಿ ಒಂದೇ ಅಂತಸ್ತು ಯಾ ವರ್ಗಕ್ಕೆ ಸೇರಿದ ವ್ಯಕ್ತಿಗಳು: the higher echelons of the bureaucracy ನೌಕರಶಾಹಿಯ ಮೇಲಂತಸ್ತಿನವರು; ವರಿಷ್ಠ ನೌಕರವರ್ಗ; ಆಡಳಿತದ ವರಿಷ್ಠ ವರ್ಗ.
ಪದಗುಚ್ಛ

in echelon ಸೋಪಾನಪಂಕ್ತಿಯಲ್ಲಿ; ಮೆಟ್ಟಿಲು ಮೆಟ್ಟಿಲಾಗಿ.

See also 1echelon
2echelon ಎ(ಏ)ಷಲಾನ್‍
ಸಕರ್ಮಕ ಕ್ರಿಯಾಪದ

ಸೋಪಾನವ್ಯೂಹದಲ್ಲಿಡು; (ಸೈನಿಕರು, ಹಡಗುಗಳು, ವಿಮಾನಗಳು, ಸಾಲುಗಳನ್ನು) ಮೆಟ್ಟಿಲುಮೆಟ್ಟಿಲಾಗಿ ನಿಲ್ಲಿಸು, ರಚಿಸು.