eat ಈಟ್‍
ಕ್ರಿಯಾಪದ
(ಭೂತರೂಪ ate ಉಚ್ಚಾರಣೆ ಎಟ್‍ ಯಾ ಏಟ್‍, ಪ್ರಾಚೀನ ಪ್ರಯೋಗ eat
ಸಕರ್ಮಕ ಕ್ರಿಯಾಪದ
  1. ತಿನ್ನು; ಅಗಿದು ನುಂಗು; ಭಕ್ಷಿಸು; ಕಬಳಿಸು.
  2. (ಪಾನೀಯವನ್ನು) ಕುಡಿ; ಸೇವಿಸು.
  3. (ರೂಪಕವಾಗಿ) ನಾಶಮಾಡು; ಪೂರ್ತಿ ತಿಂದುಹಾಕು; ನಷ್ಟಗೊಳಿಸು.
  4. (ತುಕ್ಕು ಹಿಡಿಯುವುದು ಮೊದಲಾದವುಗಳ ಮೂಲಕ) ತೂತುಮಾಡು; ರಂಧ್ರ ಬೀಳಿಸು.
ಅಕರ್ಮಕ ಕ್ರಿಯಾಪದ
  1. (ಕರ್ಮಣಿಪ್ರಯೋಗ) ತಿನ್ನು: the chips eat crisp ಉಪ್ಪೇರಿ ತಿನ್ನಲು ಗರಿಗರಿಯಾಗಿದೆ.
  2. ಊಟಮಾಡು; ಉಣ್ಣು: he eats at the hotel ಅವನು ಹೋಟೆಲಿನಲ್ಲಿ ಊಟಮಾಡುತ್ತಾನೆ.
ಪದಗುಚ್ಛ
  1. eat away (ರೂಪಕವಾಗಿ ಸಹ) ನಿಧಾನವಾಗಿ ಸವೆಸಿಬಿಡು; ಸ್ವಲ್ಪಸ್ವಲ್ಪವಾಗಿ — ಕೊರೆದುಬಿಡು, ಕೊರೆದುಹಾಕು; ಕ್ರಮೇಣ ತಿಂದುಹಾಕು: the iron bars are eaten away with rust ಕಬ್ಬಿಣದ ಸಲಾಕಿಗಳನ್ನು ತುಕ್ಕು ತಿಂದುಹಾಕುಬಿಟ್ಟಿದೆ, ಸವೆಸಿಬಿಟ್ಟಿದೆ.
  2. eat of (ಪ್ರಾಚೀನ ಪ್ರಯೋಗ) (ಸ್ವಲ್ಪಮಟ್ಟಿಗೆ, ಸ್ವಲ್ಪ) ತಿನ್ನು; ಸೇವಿಸು.
  3. eat out (ಮನೆಯಲ್ಲಿ ಅಲ್ಲದೆ ಬೇರೆ ಕಡೆ) ತಿನ್ನು; ಹೊರಗೆ ಊಟಮಾಡು.
  4. eat up
    1. (ರೂಪಕವಾಗಿ ಸಹ) ಪೂರ್ತಿ ತಿಂದುಬಿಡು; ತಿಂದು ಮುಗಿಸು.
    2. ಊಟ ಮುಗಿಸು.
    3. ತಿಂದು ಹಾಕು; ನಾಶಮಾಡು.
    4. (ರೂಪಕವಾಗಿ ಸಹ) ಹೀರು; ತುಂಬಿ ಹೋಗು; ಭರ್ತಿಯಾಗು; ಒಳಗೊಳ್ಳು: eaten up with pride ಜಂಬದಿಂದ ತುಂಬಿಹೋದ; ತಲೆ ತಿರುಗಿದ; ದುರಹಂಕಾರದ; ಗರ್ವೋದ್ಧತ.
    5. (ದೂರವನ್ನು) ವೇಗವಾಗಿ ಕ್ರಮಿಸು; ಶೀಘ್ರವಾಗಿ ಪ್ರಯಾಣಮಾಡು; ಬೇಗ ಬೇಗ ಹೋಗು.
ನುಡಿಗಟ್ಟು
  1. eat $^1$humble pie.
  2. eat into ತಿಂದುಹಾಕಲು ಶುರುಮಾಡು; ನಾಶ ಮಾಡಲು ಆರಂಭಿಸು.
  3. eat its head off (ಕುದುರೆ ಮೊದಲಾದ ಪ್ರಾಣಿಗಳ ವಿಷಯದಲ್ಲಿ) ಆಗುವ ಪ್ರಯೋಜನಕ್ಕಿಂತ ತಿಂಡಿ ತೀನಿ ವೆಚ್ಚ ಹೆಚ್ಚು; ಲಾಭಕ್ಕಿಂತ ಖರ್ಚು ವೆಚ್ಚ ಹೆಚ್ಚಾಗಿರು; ಹಾಗದ ಕೋಳಿ ಮುಪ್ಪಾಗದ ಕಾಳು ತಿಂದಿತು.
  4. eat one’s dinners = ನುಡಿಗಟ್ಟು \((6)\).
  5. eat one’s heart out ಮನಸ್ಸಿಗೆ ಹಚ್ಚಿಕೊಂಡು ಅತಿಯಾಗಿ ಕೊರಗುತ್ತಿರು, ಸದಾ ವ್ಯಥೆಪಡುತ್ತಿರು.
  6. eat one’s terms (ಬ್ರಿಟಿಷ್‍ ಪ್ರಯೋಗ) ವಕಿಲತ್ತಿಗಾಗಿ ಓದು, ವ್ಯಾಸಂಗ ಮಾಡು (ಮತ್ತು ಅದಕ್ಕಾಗಿ ಇನ್ಸ್‍ಆಹ್‍ ಕೋರ್ಟಿನಲ್ಲಿ ನಿಗದಿತ ಸಲ ಊಟಮಾಡು).
  7. eat one’s words ಆಡಿದ ಮಾತನ್ನು (ಅವಮಾನಕರ ರೀತಿಯಲ್ಲಿ) ಹಿಂತೆಗೆದುಕೊ, ನುಂಗಿಕೊ; ತನಗಾಗುವ ಅವಮಾನವನ್ನು ನುಂಗಿಕೊಂಡು ಹಿಂದೆ ಆಡಿದ್ದ ಮಾತನ್ನು ವಾಪಸ್ಸು ತೆಗೆದುಕೊ.
  8. eat out of person’s hand (ಒಬ್ಬನಿಗೆ) ಸಂರ್ಪೂಣ ಅಧೀನವಾಗಿರು; ಪೂರ್ತಿ ವಶವರ್ತಿಯಾಗಿರು; ಇನ್ನೊಬ್ಬನ ಕೈ ತುತ್ತು ತಿನ್ನು.
  9. eat (person) out of house and home ಮನೆಮಾರನ್ನೆಲ್ಲಾ ತಿಂದು ಹಾಕಿ (ವ್ಯಕ್ತಿಯನ್ನು) ನಾಶಮಾಡು; ತಿಂದು ತಿಂದು (ಒಬ್ಬನ) ಮನೆ ಹಾಳು ಮಾಡು.
  10. well, don’t eat me (ತೀವ್ರವಾಗಿ ಎದುರಾಡುತ್ತಿರುವವನಿಗೆ ಯಾ ಜೋರಾಗಿ ಪ್ರತಿವಾದ ಮಾಡುತ್ತಿರುವವನಿಗೆ ಉತ್ತರವಾಗಿ) ನೋಡು ನೋಡು, ನನ್ನ ತಿಂದುಹಾಕಬೇಡ; ಅಯ್ಯಾ, ನನ್ನನ್ನು ತಿನ್ನಬೇಡ.
  11. what’s eating you? (ಆಡುಮಾತು) ನಿನ್ನನ್ನು ಏನು ತಿನ್ನುತ್ತಿದೆ? ನಿನ್ನನ್ನು ಕಾಡುತ್ತಿರುವುದೇನು? ಏಕೆ ಕಿರಿಕಿರಿ ಪಡುತ್ತಿದ್ದೀಯೆ?