easement ಈಸ್‍ಮಂಟ್‍
ನಾಮವಾಚಕ

(ನ್ಯಾಯಶಾಸ್ತ್ರ) ಅನುಭೋಗದ ಹಕ್ಕು; ಮಾಮೂಲು ಹಕ್ಕು; ಒಬ್ಬನಿಗೆ ಇನ್ನೊಬ್ಬರ ಆಸ್ತಿ, ಜಮೀನು, ಅದರಲ್ಲಿರುವ ದಾರಿ, ಮೊದಲಾದವುಗಳ ಮೇಲಿರುವ ಹಕ್ಕು.

  1. (ಪ್ರಾಚೀನ ಪ್ರಯೋಗ) ಆನುಷಂಗಿಕ ಕಟ್ಟಡ; ಪುರವಣಿ ಕಟ್ಟಡ; (ಮುಖ್ಯಕಟ್ಟಡಕ್ಕೆ ಸೇರಿರುವಂತೆ ಕಟ್ಟಿರುವ) ಗುಡಿಸಲು ಮೊದಲಾದ ಹೆಚ್ಚಿನ ಕಟ್ಟಡ.
  2. (ಪ್ರಾಚೀನ ಪ್ರಯೋಗ) (ಬಿಕಟ್ಟು, ವೈಷಮ್ಯ, ಮೊದಲಾದವುಗಳ) ಉಪಶಮನ; ಪರಿಹಾರ; ನಿವಾರಣೆ: an easement of international tension ಅಂತರರಾಷ್ಟ್ರೀಯ ಬಿಕ್ಕಟ್ಟಿನ ಪರಿಹಾರ.