See also 2earth
1earth ಅರ್ತ್‍
ನಾಮವಾಚಕ
  1. ನೆಲ; ಭೂಮಿ; ಧರೆ; ತಿರೆ: it fell to earth ಅದು ನೆಲಕ್ಕೆ ಬಿತ್ತು.
  2. (ಬಹುವಚನ ಸಹ) (ನೆಲಗರಡಿ, ನರಿ, ಮೊದಲಾದವುಗಳ) ಬಿಲ.
  3. ಒಣನೆಲ.
  4. (ಆಕಾಶಕ್ಕೆ ವಿರುದ್ಧವಾಗಿ, ಸಾಗರಗಳನ್ನೊಳಗೊಂಡಂತೆ) ಭೂಮಿ; ಭೂತಲ.
  5. (Earth) ಭೂಗ್ರಹ; ಭೂಮಂಡಲ.
  6. ಭೂಲೋಕ; ಥಿವಿ; ಮರ್ತ್ಯಲೋಕ; ಮಾನವ ಅಸ್ತಿತ್ವಕ್ಕೆ ಭವಿಷ್ಯದ ಸ್ಥಳಗಳಾದ ಸ್ವರ್ಗಲೋಕ ಯಾ ನರಕಗಳಿಗೆ ವಿರುದ್ಧವಾಗಿ ಈಗ ಅವನು ವಾಸಿಸುವ ಲೋಕ.
  7. (ಬಹುವಚನದಲ್ಲಿ) ಮಣ್ಣು; ಬಂಡೆ, ಮರಳು ಅಲ್ಲದ್ದು.
  8. (ಬಹುವಚನದಲ್ಲಿ) (ರಸಾಯನವಿಜ್ಞಾನ) ಭಸ್ಮ; ರಸವಾದಿಗಳು ಧಾತುವೆಂದು ತಿಳಿದಿದ್ದ, ಸುಲಭವಾಗಿ ಅಪಕರ್ಷಿಸಲಾಗದ ಲೋಹದ ಆಕ್ಸೈಡು: alkaline earths ಕ್ಷಾರೀಯ ಭಸ್ಮಗಳು.
  9. (ಬ್ರಿಟಿಷ್‍ ಪ್ರಯೋಗ) (ಬಹುವಚನದಲ್ಲಿ) (ವಿದ್ಯುದ್ವಿಜ್ಞಾನ) ಭೂಸಂಪರ್ಕ:
    1. ವಿದ್ಯುತ್ತು ಭೂಮಿಗೆ ಹರಿದುಹೋಗುವಂತೆ ಯಾವುದೇ ಸಲಕರಣೆಯನ್ನು ತಂತಿಯಿಂದ ಭೂಮಿಗೆ ಸೇರಿಸುವುದು.
    2. ಅಂತಹ ತಂತಿ.
  10. (ಆಡುಮಾತು) ಭಾರಿ ಮೊತ್ತ; ಪ್ರಪಂಚ; ಜಗತ್ತು: let it cost the earth, I am ready to pay ಇಡೀ ಪ್ರಪಂಚದಷ್ಟೇ ಬೆಲೆಯಾಗಲಿ, ನಾನು ತೆರಲು ಸಿದ್ದ.
ನುಡಿಗಟ್ಟು
  1. come back to earth ಭೂಮಿಗೆ ಬಾ; ವಾಸ್ತವಿಕ ಪರಿಸ್ಥಿತಿಗೆ ಹಿಂದಿರುಗು ಯಾ ಮತ್ತೆ ಬಾ; ಸತ್ಯಸಂಗತಿಗಳತ್ತ ತಿರುಗು.
  2. gone to earth ಅವಿತುಕೊಂಡು; ಬಚ್ಚಿಟ್ಟುಕೊಂಡು.
  3. on earth ಭೂಮಿಯ ಮೇಲೆ ಎಲ್ೋ ಒಂದು ಕಡೆ ಇರುವ, ವಾಸಿಸುತ್ತಿರುವ: happiest man on earth ಭೂಮಿಯ ಮೇಲಿನ ಅತ್ಯಂತ ಸುಖ ಪುರುಷ. looked like nothing on earth ಭೂಮಿಯ ಮೇಲಿನ ಯಾವುದರ ರೀತಿಯೂ ಕಾಣುತ್ತಿಲ್ಲ.
  4. run to earth ದೀರ್ಘವಾದ ಅನ್ವೇಷಣೆಯ ತರುವಾಯ ಕಂಡುಹಿಡಿ; ಬಹಳ ಕಾಲ ಹುಡುಕಿದ ಮೇಲೆ ಹಿಡಿ, ಕಂಡುಹಿಡಿ.
  5. why on earth? ಏಕೆ ತಾನೇ? ಏಕಾದರೂ? ಯಾವ ಪುಣ್ಯಕ್ಕೆ, ಭಾಗ್ಯಕ್ಕೆ, ಪುರುಷಾರ್ಥಕ್ಕೆ? why on earth did he say so? ಯಾವ ಪುರುಷಾರ್ಥಕ್ಕೆ ಅವನು ಹಾಗೆ ಹೇಳಿದ? ಅವನು ಏಕಾದರೂ ಹಾಗೆ ಹೇಳಿದನೋ?
See also 1earth
2earth ಅರ್ತ್‍
ಸಕರ್ಮಕ ಕ್ರಿಯಾಪದ
  1. (ಗಿಡಗಳ ಬೇರುಗಳನ್ನು) ಮಣ್ಣಿನಿಂದ ಮುಚ್ಚು; ಮಣ್ಣು ಹೊಡೆ; ಮಣ್ಣು ಏರಹಾಕು.
  2. (ನರಿಯನ್ನು) ಬಿಲಕ್ಕೆ ಓಡಿಸು; ಬಿಲ ಹೊಗಿಸು.
  3. (ಬ್ರಿಟಿಷ್‍ ಪ್ರಯೋಗ) (ವಿದ್ಯುದ್ವಿಜ್ಞಾನ) ಭೂಸಂಪರ್ಕಗೊಳಿಸು; ಭೂಸಂಪರ್ಕ ಕಲ್ಪಿಸು.
ಅಕರ್ಮಕ ಕ್ರಿಯಾಪದ
  1. (ನರಿಯ ವಿಷಯದಲ್ಲಿ) ಬಿಲ ಹೊಗು; ಬಿಲ ಸೇರಿಕೊ.
  2. (ಪ್ರಾಣಿ ಮೊದಲಾದವುಗಳ ವಿಷಯದಲ್ಲಿ) (ನೆಲದಡಿಯಲ್ಲಿ ಬಿಲ, ಗುಹೆ, ಮೊದಲಾದವುಗಳಲ್ಲಿ) ಬಚ್ಚಿಟ್ಟುಕೊ; ಅವಿತುಕೊ; ಅಡಗಿಕೊ.