See also 2each
1each ಈಚ್‍
ಗುಣವಾಚಕ

(ಎರಡು ಯಾ ಹೆಚ್ಚಿನವುಗಳ ನಡುವೆ ಬಿಡಿಬಿಡಿಯಾಗಿ ಪರಿಗಣಿಸಿದ) ಪ್ರತಿ; ಪ್ರತಿಯೊಂದರ; ಪ್ರತಿಯೊಬ್ಬನ(ಳ); ಒಂದೊಂದರ; ಒಬ್ಬೊಬ್ಬನ(ಳ): each man has two votes ಪ್ರತಿಯೊಬ್ಬನಿಗೂ ಎರಡು ಓಟುಗಳಿವೆ. we have two votes each ನಮ್ಮಲ್ಲಿ ಪ್ರತಿಯೊಬ್ಬನಿಗೂ ಎರಡು ಓಟುಗಳಿವೆ. each is worse than the one before ಪ್ರತಿಯೊಂದೂ ಅದರ ಹಿಂದಿನದಕ್ಕಿಂತ ಕೆಟ್ಟದಾಗಿದೆ.

ಪದಗುಚ್ಛ

each and every ಒಂದೊಂದೂ; ಪ್ರತಿಯೊಂದೂ.

See also 1each
2each ಈಚ್‍
ಸರ್ವನಾಮ

ಪ್ರತಿಯೊಂದೂ; ಪ್ರತಿಯೊಬ್ಬನೂ(ಳೂ); ಒಂದೊಂದೂ; ಒಬ್ಬೊಬ್ಬನೂ(ಳೂ): the sides of two triangles are equal each to each ಎರಡು ತ್ರಿಕೋಣಗಳ ಜವಾಬಾಗಿರುವ ಭುಜಗಳು ಒಂದಕ್ಕೊಂದು ಸಮವಾಗಿವೆ.

ಪದಗುಚ್ಛ
  1. each other ಪರಸ್ಪರರ; ಒಂದು ಇನ್ನೊಂದನ್ನು; ಒಬ್ಬ ಇನ್ನೊಬ್ಬನನ್ನು ಯಾ ಒಬ್ಬಳು ಇನ್ನೊಬ್ಬಳನ್ನು: they hate each other ಅವರು ಪರಸ್ಪರ ದ್ವೇಷಿಸುತ್ತಾರೆ; ಪ್ರತಿಯೊಬ್ಬನೂ ಉಳಿದವರನ್ನು ದ್ವೇಷಿಸುತ್ತಾನೆ. they wore each other’s hats ಅವರು ಪರಸ್ಪರ ಟೋಪಿಗಳನ್ನು ಹಾಕಿಕೊಂಡರು; ಅವರಲ್ಲಿ ಒಬ್ಬೊಬ್ಬನೂ ಇನ್ನೊಬ್ಬನ ಟೋಪಿಯನ್ನು ಹಾಕಿಕೊಂಡ.
  2. each way (ಬ್ರಿಟಿಷ್‍ ಪ್ರಯೋಗ) (ಪಣದ ವಿಷಯದಲ್ಲಿ) ಕುದುರೆ ಗೆಲ್ಲುವುದಾಗಿ ಮತ್ತು ಮೊದಲ (ಬ್ರಿಟಿಷ್‍ ಪ್ರಯೋಗ) ಮೂರು ಯಾ (ಅಮೆರಿಕನ್‍ ಪ್ರಯೋಗ) ಎರಡು ಸ್ಥಾನಗಳಲ್ಲಿ ಬರುವುದೆಂದು ಬಾಜಿ ಕಟ್ಟುವುದು.