See also 2dull
1dull ಡಲ್‍
ಗುಣವಾಚಕ
  1. ಮಂದಬುದ್ಧಿಯ; ಚುರುಕಿಲ್ಲದ; ಮಂಕ; ಪೆದ್ದ; ಮೊದ್ದು.
  2. (ಕಿವಿ, ಕಣ್ಣು, ಮೊದಲಾದವುಗಳ ವಿಷಯದಲ್ಲಿ) ತೀಕ್ಷ್ಣವಲ್ಲದ; ಚುರುಕಿಲ್ಲದ; ಪಟುತ್ವವಿಲ್ಲದ; ಮಂದವಾದ; ಮದಡಾದ; ಅಸ್ಫುಟವಾದ.
  3. (ಅಚೇತನ ವಸ್ತುಗಳ ವಿಷಯದಲ್ಲಿ) ಜಡ; ಸಂವೇದನೆಯಿಲ್ಲದ.
  4. (ನೋವು ಮೊದಲಾದವು) ಅಸ್ಪಷ್ಟ; ಅಸ್ಫುಟ; ಮಂದ; ತೀವ್ರವಲ್ಲದ: a dull headache ಮಂದವಾದ ತಲೆನೋವು.
  5. (ವ್ಯಕ್ತಿ, ಪ್ರಾಣಿ) ಜಡ; ಚುರುಕಿಲ್ಲದ; ಚಟುವಟಿಕೆಯಿಲ್ಲದ; ಮಂದಗತಿಯ; ನಿಧಾನವಾಗಿ ಚಲಿಸುವ.
  6. (ವ್ಯಾಪಾರದ ವಿಷಯದಲ್ಲಿ) ಚುರುಕಿಲ್ಲದ; ಹುರುಪಿಲ್ಲದ; ಭರಾಟೆಯಿಲ್ಲದ; ಮಂದಿ(ಯಾದ).
  7. (ಸರಕು, ದಾಸ್ತಾನು) ಗಿರಾಕಿಯಲ್ಲದ; ಬಿಕರಿಯಾಗದ; ಸುಲಭವಾಗಿ ಮಾರಲಾಗದ; ಬೇಡಿಕೆಯಿಲ್ಲದ.
  8. ಗೆಲವಿಲ್ಲದ; ಉತ್ಸಾಹವಿಲ್ಲದ; ಹುರುಪಿಲ್ಲದ; ಮಂಕಾದ; ಮನ ಕುಗ್ಗಿದ; ಕಳೆಗುಂದಿದ.
  9. ಬೇಸರ ಬಿಡಿಸುವ; ಬೇಜಾರುಂಟು ಮಾಡುವ; ಏಕತಾನದ; ಒಂದೇ ರಾಗದ.
  10. (ಮುಖ್ಯವಾಗಿ ಮೊನೆ, ಅಲಗು) ಮೊಂಡಾದ; ಹರಿತವಿಲ್ಲದ; ಚೂಪಿಲ್ಲದ.
  11. (ಬಣ್ಣ, ಬೆಳಕು) ಮಬ್ಬಾದ; ಮಂಕಾದ; ಪ್ರಕಾಶವಿಲ್ಲದ; ಹೊಳಪಿಲ್ಲದ; ಅಸ್ಪಷ್ಟ; ತೀಕ್ಷ್ಣವಲ್ಲದ.
  12. (ಧ್ವನಿಯ, ಶಬ್ದದ ವಿಷಯದಲ್ಲಿ) ಕ್ಷೀಣ; ಅಸ್ಪಷ್ಟ; ಮಂದ.
  13. (ರುಚಿಯ ವಿಷಯದಲ್ಲಿ) ಸಪ್ಪೆಯಾದ; ನೀರಸ.
  14. (ಹವಾಮಾನ) ಮೋಡ ಕವಿದಿರುವ; ಮಂಕು ಕವಿದ.
See also 1dull
2dull ಡಲ್‍
ಸಕರ್ಮಕ ಕ್ರಿಯಾಪದ
  1. (ಆಯುಧ ಮೊದಲಾದವನ್ನು) ಮೊಂಡುಮಾಡು; ಹರಿತವಿಲ್ಲದಂತೆ ಮಾಡು.
  2. ಜಡಗೊಳಿಸು; (ದೈಹಿಕ ಯಾ ಮಾನಸಿಕ) ಚುರುಕನ್ನು, ಚಟುವಟಿಕೆಯನ್ನು ತಗ್ಗಿಸು.
  3. (ಸೂಕ್ಷ್ಮತೆ, ತೀಕ್ಷ್ಣತೆ, ತೀವ್ರತೆ) ಕಡಮೆಮಾಡು; ತಗ್ಗಿಸು.
ಅಕರ್ಮಕ ಕ್ರಿಯಾಪದ
  1. ಜಡವಾಗು; ಚುರುಕು ಯಾ ಚಟುವಟಿಕೆ ತಗ್ಗು.
  2. (ಸೂಕ್ಷ್ಮತೆ, ತೀವ್ರತೆ, ತೀಕ್ಷ್ಣತೆ) ಕುಗ್ಗು; ತಗ್ಗು; ಕಡಮೆಯಾಗು.
ಪದಗುಚ್ಛ

dull the edge of

  1. ಮೊಂಡುಮಾಡು; ಹರಿತಗೆಡಿಸು.
  2. (ರೂಪಕವಾಗಿ) (ಸೂಕ್ಷ್ಮತೆ, ಚುರುಕು, ಸ್ವಾರಸ್ಯ, ಪರಿಣಾಮ, ಮೊದಲಾದವನ್ನು) ತಗ್ಗಿಸು; ಕಡಮೆಮಾಡು.