See also 2dove
1dove ಡವ್‍
ನಾಮವಾಚಕ
  1. (ಹಲವಾರು ಬಗೆಯ) ಪಾರಿವಾಳ; ಕಪೋತ (ground dove, ring dove ಮೊದಲಾದವು).
  2. (ಕ್ರೈಸ್ತಧರ್ಮ) ಪವಿತ್ರ ಆತ್ಮ.
  3. ಶಾಂತಿಯ, ಸೌಮ್ಯತೆಯ ಯಾ ನಿಷ್ಕಳಂಕತೆಯ – ಸಂಕೇತ.
  4. ಸೌಮ್ಯ ವ್ಯಕ್ತಿ; ಮುಗ್ಧ ವ್ಯಕ್ತಿ; ಏನೂ ತಿಳಿಯದ, ಒಳ್ಳೆಯ ವ್ಯಕ್ತಿ.
  5. ಶಾಂತಿದೂತ; ಒಳ್ಳೆಸುದ್ದಿ ತರುವವ; ಶುಭವರ್ತಮಾನ ತರುವವನು; ಶಾಂತಿಯ ಸುದ್ದಿ ತರುವವ.
  6. ಮುದ್ದು; ಪ್ರಿಯ; ಮೋಹನ (ಮುಖ್ಯವಾಗಿ my dove ನನ್ನ ಪ್ರಿಯತಮನೇ, ಪ್ರಿಯತಮೆಯೇ).
  7. (ರಾಜನೀತಿಶಾಸ್ತ್ರ) ಶಾಂತಿವಾದಿ; ಸಂಧಾನಪ್ರಿಯ; ಸಂಧಾನವಾದಿ; ಶಾಂತಿಪ್ರಿಯ; ಹಿಂಸಾಮಾರ್ಗಕ್ಕೆ ಬದಲು ಸಂಧಾನಮಾರ್ಗದಿಂದ ಸಮಸ್ಯೆ ಪರಿಹರಿಸ ಬೇಕೆಂದು ಪ್ರತಿಪಾದಿಸುವವನು.
ನುಡಿಗಟ್ಟು

flutter the dove cots ತಣ್ಣಗಿದ್ದವರನ್ನು ಗಾಬರಿಪಡಿಸು; ಶಾಂತವಾಗಿದ್ದವರನ್ನು ಗಾಬರಿಪಡಿಸು, ದಿಗಿಲುಬೀಳಿಸು.

See also 1dove
2dove ಡೋವ್‍
ಕ್ರಿಯಾಪದ
dive ಪದದ ಭೂತರೂಪ ಮತ್ತು ಭೂತಕೃದಂತ.