dire ಡೈಅರ್‍
ಗುಣವಾಚಕ
  1. ಭಯಂಕರ; ಉಗ್ರ; ಭೀತಿಕಾರಕ.
  2. ವಿಪತ್ಕಾರಕ; ಸಂಕಟಕಾರಕ; ಘೋರಕೇಡುಂಟುಮಾಡುವ.
  3. ಕೇಡು ಸೂಚಿಸುವ; ಅಶುಭ ಸೂಚಕ; ದುಶ್ಯಕುನ ಸೂಚಿಸುವ: dire sisters (ಗ್ರೀಕ್‍ ಪುರಾಣ) ಉಗ್ರಾಂಬಿಕೆಯರು; ಕ್ರೋಧ ಸೋದರಿಯರು; ಗ್ರೀಕರ ಹ್ಯೂರೀಸ್‍ ಎಂಬ ಉಗ್ರಕೋಪದ ಮತ್ತು ಬಹುಪೀಡಕರಾದ ಮೂವರು ಸ್ತ್ರೀದೇವತೆಯರು.
  4. ತುರ್ತಾದ; ಜರೂರಿನ; ಜರೂರಾದ: he talked about the dire need for school buildings ಶಾಲಾಕಟ್ಟಡಗಳ ತುರ್ತು ಆವಶ್ಯಕತೆಯ ಬಗ್ಗೆ ಆತ ಮಾತನಾಡಿದ.