dimensional ಡೈ(ಡಿ)ಮೆನ್ಷನಲ್‍
ಗುಣವಾಚಕ
  1. ಅಳತೆಯ; ಪ್ರಮಾಣದ; ಪರಿಮಾಣದ ಯಾ ಅದಕ್ಕೆ ಸಂಬಂಧಿಸಿದ.
  2. ವಿಮಿತೀಯ; ವಿಮಿತಿಯ ಯಾ ವಿಮಿತಿಗೆ ಸಂಬಂಧಿಸಿದ: two-dimensional ದ್ವಿವಿಮಿತೀಯ. three dimensional ತ್ರಿವಿಮೀತಿಯ; ಮೂರು ಆಯಾಮದ; (ಘನಾಕೃತಿಯ) ಉದ್ದ ಅಗಲ ಮತ್ತು ದಪ್ಪ (ಯಾ ಎತ್ತರ ಯಾ ಆಳ ಯಾ ದೂರ)–ಉಳ್ಳ, ತೋರಿಸುವ: three-dimensional film ತ್ರಿವಿಮಿತೀಯ ಚಲನಚಿತ್ರ; ಉದ್ದ ಅಗಲಗಳ ಜೊತೆಗೆ ಆಳದ ಪರಿಣಾಮವನ್ನೂ ಉಂಟು ಮಾಡುವ ಚಲನಚಿತ್ರ.
  3. ವಿಸ್ತಾರದ; ವಿಸ್ತೀರ್ಣದ.
  4. ಆಯಾಮದ; ವ್ಯಾಪ್ತಿಯ.