dictator ಡಿಕ್ಟೇಟರ್‍
ನಾಮವಾಚಕ
  1. ನಿರಂಕುಶ ಪ್ರಭು; ಸಾಮಾನ್ಯವಾಗಿ ಒಂದು ರಾಷ್ಟ್ರದ ಪ್ರಭುತ್ವಕ್ಕೆ ತಾತ್ಕಾಲಿಕವಾಗಿ ಯಾ ಅಕ್ರಮವಾಗಿ ಬಂದವನು; ಮುಖ್ಯವಾಗಿ ಪ್ರಜಾಪ್ರಭುತ್ವದ ಸರ್ಕಾರವನ್ನು ಅಡಗಿಸುವವ ಯಾ ಅದರ ತರುವಾಯ ಅಧಿಕಾರಕ್ಕೆ ಬರುವವ.
  2. ಸರ್ವಾಧಿಕಾರಿ; ನಿರಂಕುಶಾಧಿಕಾರಿ; ಯಾವುದೇ ಕಾರ್ಯವಲಯದಲ್ಲಿ ನಿರಂಕುಶಾಧಿಕಾರ ಪಡೆದಿರುವವನು.
  3. ಹೇಳಿ ಬರೆಸುವವನು.
  4. ನಿಯಾಮಕ; ಆಚಾರ, ನಡತೆ, ವಾಡಿಕೆ, ಮೊದಲಾದವನ್ನು ಅಧಿಕಾರಯುತವಾಗಿ ವಿಧಿಸುವವನು: a dictator of fashion ಮಾದರಿ (ಹ್ಯಾಷನ್‍) ನಿಯಾಮಕ.
  5. (ಚರಿತ್ರೆ) ಸರ್ವಾಧಿಕಾರಿ; ಪರಮಾಧಿಕಾರಿ; (ರೋಮ್‍ ಮತ್ತು ಇಟಲಿಗಳಲ್ಲಿ) ತುರ್ತುಪರಿಸ್ಥಿತಿಗಳಲ್ಲಿ ನೇಮಕ ಮಾಡಲಾಗುತ್ತಿದ್ದ, ಪರಮಾಧಿಕಾರವುಳ್ಳ ಮುಖ್ಯ ದಂಡಾಧಿಕಾರಿ(ಯ ಹೆಸರು).
  6. ಪ್ರಭಾವಶಾಲಿ; ದರ್ಪದ ವ್ಯಕ್ತಿ.