detention ಡಿಟೆನ್ಷನ್‍
ನಾಮವಾಚಕ
  1. ತಡೆ; ತಡೆಯುವುದು ಯಾ ತಡೆ ಹೊಂದಿರುವುದು.
  2. (ಸೈನ್ಯ) ದಸ್ತಗಿರಿ; ಸೆರೆಹಿಡಿಯುವುದು; ಬಂಧಿಸುವುದು.
  3. ಸೆರೆ; ಬಂಧನ; ದಸ್ತಗಿರಿಯಾದವರನ್ನು ಪೊಲೀಸ್‍ ಯಾ ನಾಯಾಧಿಕಾರಿಗಳ ವಶದಲ್ಲಿ ಯಾ ಲಾಕಪ್ಪಿನಲ್ಲಿ ಇಡುವುದು.
  4. (ವಿದೇಶೀಯರು, ರಾಜಕೀಯ ಅಪರಾಧ ಶಂಕಿತರು, ಮೊದಲಾದವರ) ಬಂಧನ; ಸ್ಥಾನಬದ್ಧತೆ; ಸ್ಥಾನಬದ್ಧ ಸ್ಥಿತಿ.
  5. (ಪಾವತಿ ಆಗಬೇಕಾದದ್ದನ್ನು) ತಡೆಹಿಡಿಯುವುದು; ಹಿಡಿದಿಡುವುದು.
  6. (ಶಾಲೆಯ ವೇಳೆಯ ಅನಂತರವೂ ಮಕ್ಕಳನ್ನು ಶಾಲೆಯಲ್ಲಿಯೇ) ಕೂಡಿಹಾಕುವ ಶಿಕ್ಷೆ.
  7. ಕಡ್ಡಾಯದ ತಡ; ಬಲಾತ್ಕಾರದ ವಿಳಂಬ; ಮುಂದುವರೆಯದಂತೆ ನಿರ್ಬಂಧಗೊಳಿಸುವುದು.
ಪದಗುಚ್ಛ
  1. detention barracks ಸೇನಾ ಕಾರಾಗೃಹ; ಸೈನ್ಯದ ಬಂದಿಖಾನೆ.
  2. House of Detention (ಸೆರೆಮನೆಯಲ್ಲಿಡುವುದಕ್ಕೆ ಮುಂಚೆ ದಸ್ತಗಿರಿಯಾದವರನ್ನು ಪೊಲೀಸರ ಯಾ ನ್ಯಾಯಸ್ಥಾನದ ವಶದಲ್ಲಿರಿಸುವ) ಸೆರೆಮನೆ; ಬಂದಿಖಾನೆ; ಲಾಕಪ್ಪು.
  3. preventive detention (ಅಮೆರಿಕನ್‍ ಪ್ರಯೋಗ) ರಕ್ಷಣಾತ್ಮಕ ಸ್ಥಾನಬದ್ಧತೆ; ರಕ್ಷಣಾತ್ಮಕ ಬಂಧನ; ಶಾಸನಭಂಗ, ಶಾಂತಿಭಂಗ, ಹಿಂಸಾತ್ಮಕ ಚಟುವಟಿಕೆಗಳು, ಮೊದಲಾದವನ್ನು ತಡೆಯಲು ಇವುಗಳಿಗೆ ಕಾರಣರಾಗಬಹುದಾದ ರಾಜಕೀಯ ವ್ಯಕ್ತಿಗಳನ್ನು ಬಂಧನದಲ್ಲಿಡುವುದು.