declare ಡಿಕ್ಲೇರ್‍
ಸಕರ್ಮಕ ಕ್ರಿಯಾಪದ
  1. ತಿಳಿಯಪಡಿಸು; ಸಾರಿ ಹೇಳು; ಪ್ರಕಟಿಸು; ಪ್ರಕಟಪಡಿಸು; ಗೋಷಿಸು: declare war ಯುದ್ಧ ಘೋಷಿಸು. declare a dividend ಲಾಭಾಂಶ ಪ್ರಕಟಿಸು.
  2. (ವಸ್ತುಗಳ ವಿಷಯದಲ್ಲಿ) ಸ್ಪಷ್ಟಪಡಿಸು; ಪ್ರಕಟಪಡಿಸು; ಪ್ರಕಟಿಸು; ಸಿದ್ಧಪಡಿಸು; ನಿದರ್ಶನ ಮಾಡಿಕೊಡು: the heavens declare the glory of God ಆಕಾಶ ಭಗವಂತನ ವೈಭವವನ್ನು ಪ್ರಕಟಿಸುತ್ತದೆ.
  3. (ವ್ಯಕ್ತಿ ಮೊದಲಾದವರನ್ನು ಹೀಗೆಂದು) ಸಾರು; ಹೇಳು; ಪ್ರಕಟಿಸು; ಘೋಷಿಸು; ತೋರಿಸು: declare him an enemy to human kind ಅವನು ಮಾನವಕುಲದ ಶತ್ರುವೆಂದು ಸಾರು.
  4. (ಕ್ರಿಕೆಟ್‍) ಮುಕ್ತಾಯ ಘೋಷಿಸು; ಎಲ್ಲ ವಿಕೆಟ್ಟುಗಳು ಬೀಳದಿದ್ದರೂ ಇನಿಂಗ್ಸ್‍ ಮುಗಿಯಿತೆಂದು ಆಟ ನಿಲ್ಲಿಸು; ಎಲ್ಲ ಆಟಾಗಾರರ ಸರದಿ ಮುಗಿಯದಿದ್ದರೂ ಮುಗಿಯಿತೆಂದು ಬ್ಯಾಟಿಂಗ್‍ ನಿಲ್ಲಿಸಲು ತೀರ್ಮಾನಿಸು.
  5. ಸುಂಕದ ಸರಕುಗಳ ಪಟ್ಟಿ ಕೊಡು; ಸುಂಕ ಬೀಳುವ ಸರಕುಗಳನ್ನು ಹೊಂದಿರುವೆನೆಂದು ಹೇಳಿಕೆ ಕೊಡು.
  6. (ಬ್ರಿಡ್ಜ್‍ ಇಸ್ಪೀಟಾಟ) ತುರುಫು ಹೇಳು; ‘ತುರುಫಿಲ್ಲ’ ಎನ್ನು.
  7. (ಇಸ್ಪೀಟಾಟ) ಎಲೆಗಳ ಗೊತ್ತಾದ ಜೊತೆ ತನ್ನಲ್ಲಿದೆಯೆಂದು – ಘೋಷಿಸು, ತೋರಿಸು.
  8. ವರಮಾನದ ಹೇಳಿಕೆ ಕೊಡು; ಆದಾಯ ಇಷ್ಟೆಂದು ತಿಳಿಸು, ಘೋಷಿಸು: declare income for taxation ತೆರಿಗೆಗಾಗಿ ವರಮಾನದ ಹೇಳಿಕೆ ಕೊಡು.
ಅಕರ್ಮಕ ಕ್ರಿಯಾಪದ
  1. ಹೇಳಿಕೆ ಕೊಡು; ಘೋಷಿಸು.
  2. (ವ್ಯಕ್ತಿ ಮೊದಲಾದವರ ವಿಷಯದಲ್ಲಿ ಅಭಿಪ್ರಾಯ) ಘೋಷಿಸು; ಸಾರು; ಪ್ರಕಟಿಸು; ಹೇಳು.
  3. (ಕ್ರಿಕೆಟ್‍) ಮುಕ್ತಾಯ ಘೋಷಿಸು; ಎಲ್ಲ ವಿಖೆಟ್ಟುಗಳು ಬೀಳುವ ಮೊದಲೇ ಆಟದ ಸರದಿ ಮುಗಿಸು.
ಪದಗುಚ್ಛ
  1. declare against ವಿರುದ್ಧವಾಗಿರು: ವಿರೋಧಿಸು.
  2. declare for ಪರವಾಗಿರು; ಬೆಂಬಲ ಕೊಡು; ಪರವಾಗಿ ಹೇಳಿಕೆ ಕೊಡು.
  3. declare innings closed = declare ಸಕರ್ಮಕ ಕ್ರಿಯಾಪದ \((4)\).
  4. declare off (ವ್ಯಾಪಾರ, ಕರಾರು, ಮೊದಲಾದವನ್ನು) ನಿಲ್ಲಿಸು; ಸಾಕುಮಾಡು; ರದ್ದುಮಾಡು; ಮುಕ್ತಾಯಗೊಳಿಸು; ಅಂತ್ಯಗೊಳಿಸು.
  5. declare oneself
    1. ಸ್ವಂತ ಸಂಕಲ್ಪ ಪ್ರಕಟಿಸು, ಘೋಷಿಸು; ಸ್ವಂತ ಅಭಿಪ್ರಾಯ, ಇರಾದೆ, ಉದ್ದೇಶ, ಒಲವುಗಳನ್ನು – ತಿಳಿಸು ಯಾ ಘೋಷಿಸು.
    2. ನಿಜಸ್ವರೂಪ ಪ್ರಕಟಿಸು; ತನ್ನ ಅಸ್ತಿತ್ವ. ನಿಜರೂಪ ಯಾ ಚಾರಿತ್ರ್ಯವನ್ನು ತೋರಿಸು, ಬಹಿರಂಗಪಡಿಸು.
  6. well, I (do) declare! (ಐಶ್ವರ್ಯ, ಅಪನಂಬಿಕೆ, ಬೇಸರ ಸೂಚಕವಾಗಿ) ಚೆನ್ನಾಯಿತು! ಲಕ್ಷಣಾವಾಯಿತು! ಏನು ಹೇಳಲಿ! ಏನು ಹೇಳೋಣ!